ಒತ್ತುವರಿದಾರರ ಪಟ್ಟಿ ಬಿಡುಗಡೆ : ಬಿಲ್ಡರ್,ರಾಜಕಾರಣಿ, ಅಧಿಕಾರಿಗಳ ಬಂಡವಾಳ ಬಯಲು

ಈ ಸುದ್ದಿಯನ್ನು ಶೇರ್ ಮಾಡಿ

NRR

ಬೆಂಗಳೂರು,ಆ.12- ನಗರದ ರಾಜಕಾಲುವೆ, ಬಫರ್ ಜೋನ್ ಒತ್ತುವರಿ ಮಾಡಿಕೊಂಡಿರುವ ಬಿಲ್ಡರ್‍ಗಳು, ಅಂತಹ ಬಿಲ್ಡರ್‍ಗಳೊಂದಿಗೆ ಪಾಲುದಾರರಾಗಿರುವ ಪ್ರಮುಖ ರಾಜಕಾರಣಿಗಳು ಹಾಗೂ ಉದ್ದೇಶಪೂರ್ವಕವಾಗಿ ಒತ್ತುವರಿದಾರರ ಹೆಸರನ್ನು ಕೈಬಿಟ್ಟಿರುವ ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ಬಿಜೆಪಿ ನಿರ್ಧರಿಸಿದೆ.   ನಗರದಲ್ಲಿ ರಾಜಕಾಲುವೆ ಒತ್ತುವರಿಯಿಂದ  ಸಂತ್ರಸ್ತರಾಗಿರುವುದು ಕೇವಲ ಮಧ್ಯಮ ಮತ್ತು ಬಡವರ್ಗದವರು. ಆದರೆ ಸರ್ಕಾರ ನಿಜವಾದ ಒತ್ತುವರಿದಾರರನ್ನು ರಕ್ಷಿಸುತ್ತಿದೆ. ಹೀಗಾಗಿ ನಾವು ಎಲ್ಲಾ ಒತ್ತುವರಿದಾರರು ಹಾಗೂ ಅವರಿಗೆ ನೆರವು ನೀಡಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೆಸರು ಬಿಡುಗಡೆ ಮಾಡಲು ತೀರ್ಮಾನಿಸಿದ್ದೇವೆ ಎಂದು  ನಗರ ಬಿಜೆಪಿ ವಕ್ತಾರ ಹಾಗೂ  ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ  ಎನ್.ಆರ್.ರಮೇಶ್ ತಿಳಿಸಿದ್ದಾರೆ.

ರಾಜಕಾಲುವೆ ಮತ್ತು ಬಫರ್ ಜೋನ್ ಒತ್ತುವರಿ ಮಾಡಿಕೊಂಡಿರುವ 2300ಕ್ಕೂ ಹೆಚ್ಚು ಬಿಲ್ಡರ್‍ಗಳ ಪಟ್ಟಿ ಸಿದ್ದಪಡಿಸಿದ್ದೇವೆ. ಇಂತಹ ಬಿಲ್ಡರ್‍ಗಳೊಂದಿಗೆ ಕೆಲ ಪ್ರಮುಖ ರಾಜಕಾರಣಿಗಳು ಪಾಲುದಾರರಾಗಿದ್ದಾರೆ. ಅಂಥವರ ಪಟ್ಟಿಯನ್ನು ಬುಧವಾರ ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.   ಕೆಲ ಬಿಬಿಎಂಪಿ ಅಧಿಕಾರಿಗಳು  ಪ್ರಭಾವಿ ಬಿಲ್ಡರ್‍ಗಳೊಂದಿಗೆ ಶಾಮೀಲಾಗಿ ಅವರ ಅಕ್ರಮವನ್ನು ಮುಚ್ಚಿ ಹಾಕಲು ಸಹಕರಿಸುತ್ತಿದ್ದಾರೆ. ಅವರ ಬಂಡವಾಳ ಬಯಲು ಮಾಡುವುದೇ ನಮ್ಮ ಉದ್ದೇಶ ಎಂದರು.  ಒತ್ತುವರಿದಾರರ ಹೆಸರುಗಳನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಆದರೆ ವೆಬ್‍ಸೈಟ್‍ನಲ್ಲಿ ಪ್ರಕಟವಾಗಿರುವ ವ್ಯಕ್ತಿಗಳು ಅಮಾಯಕರು.    ಇಂತಹ ಪಟ್ಟಿಯಿಂದ ಯಾವುದೇ ಪ್ರಯೋಜನವಿಲ್ಲ. ನಾವು ಇನ್ನು ಮೂರು ದಿನ ಕಾಯುತ್ತೇವೆ. ನಿಜವಾದ ಒತ್ತುವರಿದಾರರ ಪಟ್ಟಿಯನ್ನು ಸರ್ಕಾರ ಪ್ರಕಟಿಸದಿದ್ದರೆ ಬುಧವಾರ ನಾವೇ ಎಲ್ಲ ಒತ್ತುವರಿದಾರರ  ಬಂಡವಾಳ ಬಯಲು ಮಾಡುತ್ತೇವೆ ಎಂದು ಅವರು ಈ ಸಂಜೆಗೆ ತಿಳಿಸದರು.

► Follow us on –  Facebook / Twitter  / Google+

Facebook Comments

Sri Raghav

Admin