ಒದಂಕಿ ಲಾಟರಿ ಹಗರಣ : ಸಿಬಿಐನಿಂದ ಓಂಪ್ರಕಾಶ್,ಕೆಂಪಯ್ಯ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

SDGFgsggಬೆಂಗಳೂರು, ಆ.5- ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸಗಾವಿದ್ದ ಒದಂಕಿ ಲಾಟರಿ ಹಗರಣದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಅವರನ್ನು ಸಿಬಿಐ ಇಂದು ವಿಚಾರಣೆಗೆ ಒಳಪಡಿಸಿತು. ನವದೆಹಲಿಯ ಸಿಬಿಐ ಕಚೇರಿಯಲ್ಲಿ ಇವರನ್ನು ಪ್ರತ್ಯೇಕವಾಗಿ ಒಂದು ಗಂಟೆಗೂ ಹೆಚ್ಚು ಕಾಲ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದರು.  ತೀವ್ರ ಕುತೂಹಲ ಕೆರಳಿಸಿದ್ದ ಒದಂಕಿ ಲಾಟರಿ ಹಗರಣದಲ್ಲಿ  ಡಿಜಿಪಿ ಓಂಪ್ರಕಾಶ್ ಹಾಗೂ ಕೆಂಪಯ್ಯ ಅವರ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿದ್ದ ಕಾರಣ ಇಂದು ಒಂದೇ ವಿಮಾನದಲ್ಲಿ ನವದೆಹಲಿಗೆ ತೆರಳಿದ್ದ ಈ ಇಬ್ಬರು ವಿಚಾರಣೆಗೆ ಹಾಜರಾದರು. ಪ್ರಕರಣದ ಆರೋಪ ಹೊತ್ತಿರುವ ಕೆಲ ಅಧಿಕಾರಿಗಳು ವಿಚಾರಣೆ ಸಂದರ್ಭದಲ್ಲಿ ಓಂಪ್ರಕಾಶ್ ಹಾಗೂ ಕೆಂಪಯ್ಯ ಅವರ ಹೆಸರು ಬಾಯ್ಬಿಟ್ಟಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೋಟಿಸ್ ನೀಡಿತ್ತು. ಅದರಂತೆ  ಇಂದು ಸಿಬಿಐನ ಕೇಂದ್ರ ಕಚೇರಿಗೆ ತೆರಳಿ ಹಾಜರಾದರು.

ಒದಂಕಿ ಲಾಟರಿ ಹಗರಣದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಅಲೋಕ್‍ಕುಮಾರ್ ಅವರನ್ನು ಸರ್ಕಾರ ಅಮಾನತು ಮಾಡಿತ್ತು. ಈ ಪ್ರಕರಣದ ವಿಚಾರಣೆ ಅಂತಿಮ ಹಂತಕ್ಕೆ ಬಂದಿದ್ದು,  ಈ ಪ್ರಕರಣದಲ್ಲಿ  ಕೇಳಿ ಬಂದಿರುವ ಎಲ್ಲ ಆರೋಪಿಗಳ ವಿಚಾರಣೆಯನ್ನು ಸಿಬಿಐ ನಡೆಸಿದೆ.  ಪ್ರಕರಣದ ಕಿಂಗ್‍ಪಿನ್ ಪಾರಿರಾಜನ್ ಜತೆ ಸಂಪರ್ಕ ಹೊಂದಿದ್ದ ಆರೋಪದಡಿ ಎಡಿಜಿಪಿ ಸುನಿಲ್‍ಕುಮಾರ್, ಐಜಿಪಿಗಳಾದ ಅಲೋಕ್‍ಕುಮಾರ್, ಹರಿಶೇಖರನ್, ಅರುಣ್‍ಚಕ್ರವರ್ತಿ, ಪದ್ಮನಯನ, ಡಿಸಿಪಿ ಸತೀಶ್‍ಕುಮಾರ್, ಧರಣೇಶ್ ಸೇರಿದಂತೆ 35ಕ್ಕೂ ಹೆಚ್ಚು ಅಧಿಕಾರಿಗಳ ವಿಚಾರಣೆ ನಡೆಸಲಾಗಿದೆ.  ಈ ಸಂದರ್ಭದಲ್ಲಿ ಈ ಇಬ್ಬರ ಹೆಸರುಗಳು ಕೇಳಿ ಬಂದಿದ್ದವು. ಹಾಗಾಗಿ ಇವರ ವಿಚಾರಣೆಗೆ ಸಿಬಿಐ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿ ಇಂದು ವಿಚಾರಣೆ ಎದುರಿಸಿದರು.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin