ಒಬಾಮಾ ವಿರುದ್ಧ ಅವಾಚ್ಯ ಪದ ಬಳಕೆ : ಫಿಲಿಪ್ಪೈನ್ಸ್ ಅಧ್ಯಕ್ಷರ ಭೇಟಿ ರದ್ದು
ವಾಷಿಂಗ್ಟನ್, ಸೆ.6-ಅಮೆರಿಕ ಅಧ್ಯಕ್ಷರ ವಿರುದ್ಧ ಅವಾಚ್ಯ ಪದ ಬಳಸಿದ ಕಾರಣಕ್ಕಾಗಿ ಫಿಲಿಪ್ಪೈನ್ಸ್ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟೆ ಭೇಟಿಯನ್ನು ಬರಾಕ್ ಒಬಾಮಾ ರದ್ದುಗೊಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರು ಫಿಲಿಪ್ಪಿನ್ಸ್ ಅಧ್ಯಕ್ಷ ರೋಡ್ರಿಗೊ ಡ್ಯುಟೆರ್ಟೆ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸುವುದಿಲ್ಲ. ಬದಲಿಗೆ ಅವರು ಈ ಮಧ್ಯಾಹ್ನ ಕೊರಿಯಾದ ಅಧ್ಯಕ್ಷರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆತ ತನ್ನನ್ನು ಏನೆಂದು ತಿಳಿದಿದ್ದಾನೆ. ನಾನು ಅಮೆರಿಕದ ಕೈಗೊಂಬೆಯಲ್ಲ. ನಾನು ಒಂದು ಸಾರ್ವಭೌಮತ್ವ ದೇಶದ ಅಧ್ಯಕ್ಷ.
ಫಿಲಿಪ್ಪಿನ್ಸ್ ಜನರನ್ನು ಹೊರತುಪಡಿಸಿ ನಾನು ಯಾರಿಗೂ ಉತ್ತರದಾಯಿಯಲ್ಲ. ಸೂ. ಮಗ ಏನೆಂದು ತಿಳಿದುಕೊಂಡಿದ್ದಾನೆ ಎಂದು ಹೊಸದಾಗಿ ಚುನಾಯಿತರಾದ ಫಿಲಿಪ್ಪಿನ್ಸ್ ಅಧ್ಯಕ್ಷರು ಬರಾಕ್ ಒಬಾಮಾರನ್ನು ಕಟು ವಾಕ್ಯಗಳಲ್ಲಿ ಟೀಕಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಅವರೊಂದಿಗಿನ ಭೇಟಿಯನ್ನು ರದ್ದುಗೊಳಿಸಲಾಗಿದೆ.
► Follow us on – Facebook / Twitter / Google+