ಒಮ್ಮೆ ನೋಡಲೇಬೇಕು ಲಾಲ್‍ಬಾಗ್ ನ ಫಲಪುಷ್ಪ ಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

Lalbagh-1

ಹೂವಿನ ಅಂದ-ಚೆಂದಕ್ಕೆ ಮನ ಸೋಲದೆ ಇರುವವರು ಯಾರಿದ್ದಾರೆ… ಅದರಲ್ಲೂ ತರಹೇವಾರಿ ಪುಷ್ಪಗಳನ್ನು ಒಂದೇ ಸೂರಿನಡಿ ಕಣ್ತುಂಬಿಕೊಳ್ಳುವ ಅವಕಾಶ ಉದ್ಯಾನನಗರಿಯಲ್ಲಿ  ಕಲ್ಪಿಸಲಾಗಿದ್ದು,  ಖಂಡಿತಾ ಮಿಸ್ ಮಾಡ್ಕೊಳ್ದೆ ನೋಡಿ.  ಹೌದು, ಪ್ರತಿ ವರ್ಷದಂತೆ ಈ ಬಾರಿಯೂ ಸಹ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಸ್ಯಕಾಶಿ ಲಾಲ್‍ಬಾಗ್‍ನಲ್ಲಿ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಪ್ರವಾಸಿಗರು, ನಗರದ ನಾಗರಿಕರು, ಶಾಲಾ ವಿದ್ಯಾರ್ಥಿಗಳನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಲಾಲ್‍ಬಾಗ್ ಉದ್ಯಾನವನ 1912ರಲ್ಲಿ ಅಂದಿನ ಸೂಪರಿಟೆಂಡೆಂಟ್ ಆಗಿದ್ದ ಜಿ.ಎಚ್.ಕೃಂಬನಗಲ್ ಅವರು ಅವರು ಸ್ಥಾಪಿಸಿದ್ದಾರೆ. 2016ಕ್ಕೆ 104 ವರ್ಷಗಳಾಯಿತು. ಈ ಬಾರಿ 204ನೆಯ ಫಲಪುಷ್ಪ ಪ್ರದರ್ಶನವಾಗಿ ಕಂಗೊಳಿಸುತ್ತಿದೆ ಹಾಗೂ ಪ್ರವಾಸಿಗರ ಮನಮುಟ್ಟವ ವಾತಾವರಣ ಸೃಷ್ಟಿಗೊಂಡಿದೆ.

Lalbagh-3

ಈ ಫಲಪುಷ್ಪ ಪ್ರದರ್ಶನ 1922ರಿಂದಲೇ ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘಗಳು ಜತೆಗೂಡಿ ವರ್ಷಕ್ಕೆ ಎರಡು ಬಾರಿಯಂತೆ ಬೇಸಿಗೆ ಮತ್ತು ಚಳಿಗಾಲಕ್ಕೆ  ಸರಿಯಾಗಿ ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ವ ಹಾಗೂ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಎರಡು ಬಾರಿ ನಡೆಸುತ್ತಾ ಬಂದಿದ್ದಾರೆ. ಅದೇ ರೀತಿಯಾಗಿ 204ನೆ ಫಲಪುಷ್ಪ ಪ್ರದರ್ಶನವನ್ನು ಲಾಲ್‍ಬಾಗ್ ಉದ್ಯಾನವನದಲ್ಲಿ  ನಡೆಯುತ್ತಿದ್ದು,  ವಿಶ್ವ ವಿಖ್ಯಾತವಾಗಿದೆ. ಅಂತರ ರಾಷ್ಟ್ರೀಯ ದಾಖಲೆಯೆಂದರೂ ತಪ್ಪಾಗಲಾರದು. ಹಲವು ಪ್ರಭೇದಗಳ ಹೂವುಗಳು, ಹಣ್ಣುಗಳು, ತರಕಾರಿಗಳು ಮತ್ತು ಹಲವು ವಿಶೇಷ ಅಲಂಕಾರಿಕ ಗಿಡಗಳನ್ನು ಕುಂಡದಲ್ಲಿ ಬೆಳೆಸಿ ಪ್ರದರ್ಶಿಸಿದ್ದಾರೆ. 100ಕ್ಕೂ ಹೆಚ್ಚು ಬಗೆಯ ವಾರ್ಷಿಕವಾಗಿ ಹೂ ಬಿಡುವ ಆಕರ್ಷಕ ಅಂಥೋರಿಯಂ, ಅರ್ಕೆಡ್ಸ್, ಎಂಕಾ, ಬೋಗನ್ಸಿಲ್ಲಾ, ಇಂಪೇಷನ್ಸ್, ಲಿಲ್ಲಿ, ಅಗಾಪಾಂಧಸ್, ಹೆಲಿಕೋನಿಯೊ, ಗುಲಾಬಿ ಇನ್ನೂ ಮುಂತಾದ ಹೂ ಗಿಡಗಳ ಸೌಂದರ್ಯ ವಾತಾವರಣಕ್ಕೆ ರಂಗು ತುಂಬಿದೆ.

Lalbagh-4

ಲಾಲ್‍ಬಾಗ್ ಗಾಜಿನ ಮನೆಯಲ್ಲಿ ದೆಹಲಿಯ ಪಾರ್ಲಿಮೆಂಟ್ ಹೌಸನ್ನು ಪುಷ್ಪಗಳಿಂದ ನಿರ್ಮಾಣ ಮಾಡಿದೆ. 4 ಲಕ್ಷಕ್ಕೂ ಹೆಚ್ಚು ಬಣ್ಣ ಬಣ್ಣದ ಗುಲಾಬಿ ಹೂಗಳನ್ನು ಬಳಸಿ ಸಂಸತ್ ಭವನ ನಿರ್ಮಿಸಲಾಗಿದೆ. 9 ದಿನಗಳ ಕಾಲ 32 ನುರಿತ ನೌಕರರು, 52 ಜನ ಪುಷ್ಪ ಪರಿಣಿತರ ಪರಿಶ್ರಮದಿಂದ ರೂಪುಗೊಂಡಿದೆ.  ಗಾಜಿನ ಮನೆಯ 4  ಮೂಲೆಗಳಲ್ಲಿ ಹೂವಿನ ಪಿರಮಿಡ್‍ಗಳ ರಚನೆ ಮಾಡಿದ್ದಾರೆ. ಈ ಪಿರಮಿಡ್‍ಗಳ ವಿವಿಧ ಹೂ-ಗಿಡಗಳನ್ನು ಬಳಸಿ ಅಪರೂಪದ ಕೀಟಭಕ್ಷಕ ಗಿಡಗಳು ಮತ್ತು ಕುಬ್ಜ ಇಕ್ಸೋರಾ ಗಿಡಗಳನ್ನು ಒಳಾಂಗಣದಲ್ಲಿ ಬಳಸಿದ್ದಾರೆ.  ಗಾಜಿನ ಮನೆಯಲ್ಲಿ ಮೊದಲ ಬಾರಿಗೆ ಒಳಾಂಗಣದಲ್ಲಿ ತÀಂಪು ನೀಡುವ ಫಾಗರ್ಸ್ ಅಳವಡಿಸಲಾಗಿದೆ. ಜನ ಸಂದಣಿಯಿಂದ ಏಳುವ ಧೂಳಿನಿಂದ ಹೆಚ್ಚು ಉಷ್ಣಾಂಶದಿಂದ ಹೂಗಳು  ಬೇಗನೇ ಬಾಡುತ್ತಿದ್ದವು. ಅದರಿಂದಲೇ ಗಾಜಿನ ಮನೆಯ ಒಳಾಂಗಣದಲ್ಲಿ ತಂಪಾದ ವಾತಾವರಣಕ್ಕೆ ನೀರು ಮಿಶ್ರಿತ ಗಾಳಿ ವಾತಾವರಣ ನಿರ್ಮಿಸಿರುವುದು ಸೌಂದರ್ಯ ಹೆಚ್ಚಿಸಿದೆ.

Lalbagh-2

ಡಾ ಎಂ.ಎಚ್.ಮರೀಗೌಡರ ಮರಳು ಕಲಾಕೃತಿ, ಮಂಡ್ಯ ಜಿಲ್ಲೆಯ ಪ್ರಶಾಂತ್ ನಿರ್ಮಾಣದ ಮಂಟಪ ನೋಡುಗರನ್ನು ಮನಸೆಳೆಯುತ್ತಿವೆ.  ತರಕಾರಿ ಹಾಗೂ ಆಕರ್ಷಕ ಹೂಗಳಿಂದ ಮತ್ತು ಕ್ಯಾಪ್ಸಿಕಂನಿಂದ  ಗರಿಗೆದರಿದ ನವಿಲಿನ ಪ್ರತಿರೂಪಗಳು  ರೋಮಾಂಚನಗೊಳಿಸುತ್ತಿವೆ.  ಎಲ್ಲಾ ಕಡೆ ವರ್ಣರಂಜಿತ ಹೂಗಳು. ತರಕಾರಿಗಳು, ಔಷಧಿಯ ಗಿಡಗಳು, ಅಲಂಕಾರಿಕ ಗಿಡಗಳು, ವಾಣಿಜ್ಯ ಹೂಗಳು, ಹಣ್ಣು-ಪ್ಲಾಂಟೆಷನ್ ಗಿಡಗಳು, ಬೋನ್ಯಾಯ್ ಗಿಡಗಳು, ತೋಟಗಾರಿಕೆ ಸಲಕರಣೆಗಳನ್ನೊಳಗೊಂಡ 100ಕ್ಕೂ ಹೆಚ್ಚು ತಾಂತ್ರಿಕ ಹಾಗೂ ವಾಣಿಜ್ಯ ಮಳಿಗೆಗಳು ಈ ವರ್ಷ ಪ್ರದರ್ಶನದಲ್ಲಿವೆ. ಪ್ರಕೃತಿ ಪ್ರೇಮಿಗಳು, ಸಸ್ಯ ಪ್ರೇಮಿಗಳು, ಶಾಲಾ ಮಕ್ಕಳು, ವಿದೇಶಿ ಪ್ರವಾಸಿಗರನ್ನು ಲಾಲ್‍ಬಾಗ್ ತನ್ನತ್ತ ಸೆಳೆಯುತ್ತಿದೆ. ಫಲಪುಷ್ಪ ಪ್ರದರ್ಶನದ ವಿವಿಧ ಸ್ಪರ್ಧೆಗಳಲ್ಲಿ ಒಟ್ಟು 1188 ಜನ ಭಾಗವಹಿಸಿದ್ದಾರೆ.
-ಶ್ರೀನಿವಾಸ್‍ಗೌಡ,ಕೋಲಾರ

Facebook Comments

Sri Raghav

Admin