ಒರಿಸ್ಸಾದಲ್ಲಿ ಮಾವೊ ಉಗ್ರರ ಅಟ್ಟಹಾಸ : ನೆಲಬಾಂಬ್‍ಗೆ 7 ಪೊಲೀಸರು ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Land-Mine

ಭುವನೇಶ್ವರ್, ಫೆ. 2-ಮಾವೊ ಉಗ್ರರು ರಸ್ತೆಯಲ್ಲಿ ಹುದುಗಿಸಿಟ್ಟಿದ್ದ ಪ್ರಬಲ ನೆಲಬಾಂಬ್ ಸ್ಫೋಟಕ್ಕೆ ಏಳಕ್ಕೂ ಹೆಚ್ಚು ಸಶಸ್ತ್ರಪಡೆ ಪೊಲೀಸರು ಬಲಿಯಾಗಿದ್ದು ಹಲವರು ಗಾಯಗೊಂಡಿದ್ದಾರೆ. ಗಾಯಾಳು ಜವಾನರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ.  ನಿನ್ನೆ ರಾತ್ರಿ ಸಶಸ್ತ್ರ ಮೀಸಲು ಪಡೆ ಪೊಲೀಸರು ಕೋರಪತ್ ಜಿಲ್ಲೆಯ ಸುಂಕಿ ಬಳಿ ತಮ್ಮ ವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆಯಲ್ಲಿ ಚರಂಡಿಯೊಂದರಲ್ಲಿ ಹುದುಗಿಸಿಟ್ಟಿದ್ದ ಪ್ರಬಲ ನೆಲಬಾಂಬ್ ಸ್ಫೋಟಿಸಿದೆ. ಸ್ಫೋಟದ ತೀವ್ರತೆಗೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ಧಾರೆ ಎಂದುಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒರಿಸ್ಸಾ-ಆಂಧ್ರಪ್ರದೇಶ್ ಗಡಿಯಲ್ಲಿ ಮಾವೊ ಉಗ್ರರ ಉಪಟಳ ನಿರಂತರವಾಗಿ ಮುಂದುವರಿದಿದೆ. ಸ್ಫೋಟಗೊಳ್ಳುತ್ತಿದ್ದಂತೆಯೇ ಅದರ ರಭಸಕ್ಕೆ ಪೊಲೀಸರು ತೆರಳುತ್ತಿದ್ದ ಮಿನಿಬಸ್ 60 ಅಡಿ ಆಳದ ಕಣಿವೆಗೆ ಬಿದ್ದಿದೆ. ಇವರೆಲ್ಲ ಕೋರಪತ್‍ನಿಂದ ಅಂಗುಲ್‍ಗೆ ಚಾಲನಾ ತರಬೇತಿಗಾಗಿ ತೆರಳುತ್ತಿದ್ದರು. ಸುಂಕಿಗೆ ತೀರಾ ಸಮೀಪದಲ್ಲಿಯೇ ಬಿಎಸ್‍ಎಫ್ ಕ್ಯಾಂಪ್ ಇದ್ದರೂ ಘಟನೆ ನಡೆದು ಒಂದು ಗಂಟೆಯಾದರೂ ಕ್ಯಾಂಪ್‍ನ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin