ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಕ್ರಿಕೆಟ್ ಆಟಗಾರ್ತಿ..!

ಈ ಸುದ್ದಿಯನ್ನು ಶೇರ್ ಮಾಡಿ

Cricket

ರಿಯೊ ಡಿ ಜೆನೈರೋ,ಆ.21- ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ್ತಿ ಸುನ್ನೆಟ್ಟೆ ವಿಲ್ಜೊಯಿನ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡು ಬೆಳ್ಳಿ ಪದಕವನ್ನು ತನ್ನ ಕೊರಳಿಗೆ ಹಾಕಿಕೊಂಡಿದ್ದಾರೆ…!
ರಿಯೊ ಒಲಿಂಪಿಕ್ಸ್ನ ಮಹಿಳೆಯರ ಜಾವಲಿನ್ ಕ್ರೀಡೆಯಲ್ಲಿ ಪಾಲ್ಗೊಂಡು ಫೈನಲ್ನಲ್ಲಿ 64.92 ಮೀಟರ್ ದೂರಕ್ಕೆ ಎಸೆಯುವ ಮೂಲಕ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
ಬಂಗಾರದ ಪದಕ ಜಯಿಸಿದ ಕ್ರೊವೇಷಿಯಾದ ಸಾರಾ ಕೋಲಕ್ 66.18 ಮೀಟರ್ ದೂರ ಜಾವೆಲಿಯನ್ ಎಸೆದಿದ್ದರು.  ಬೆಳ್ಳಿ ಪದಕ ಜಯಿಸಿದ ಸುನ್ನೆಟ್ಟೆ ವಿಲ್ಜೊಯಿನ್ 2002 ಮಾರ್ಚ್ನಲ್ಲಿ ಭಾರತದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಪಾದಾರ್ಪಣೆ ಮಾಡಿ ಎರಡು ಇನ್ನಿಂಗ್ಸ್ಗಳಲ್ಲಿ 17 ಹಾಗೂ 71 ರನ್ಗಳನ್ನು ಗಳಿಸಿದ್ದರು. ಅಲ್ಲದೆ 17 ಏಕದಿನ ಪಂದ್ಯಗಳಿಂದ 1 ಅರ್ಧಶತಕ ಸೇರಿದಂತೆ 198 ರನ್ಗಳನ್ನು ಕಲೆ ಹಾಕಿದ್ದಾರೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿರುವಾಗಲೇ ಈಕೆ ಸಾಧನೆ ಗಮನ ಸೆಳೆಯುವಂಥದ್ದು.

► Follow us on –  Facebook / Twitter  / Google+

Facebook Comments

Sri Raghav

Admin