ಒಲಿಂಪಿಕ್ಸ್ ನಲ್ಲಿ ದೀಪಾ ಇತಿಹಾಸ : ವಾಲ್ಟ್ ನಲ್ಲಿ ಫೈನಲ್ಗೇರಿದ ಭಾರತದ ಮೊದಲ ಮಹಿಳೆ

ಈ ಸುದ್ದಿಯನ್ನು ಶೇರ್ ಮಾಡಿ

Deepa

ರಿಯೋ ಡಿಜನೈರೊ,ಆ.8-ಜಿಮ್ನಾಸ್ಟ್  ದೀಪಾ ಕರ್ಮಾಕರ್ ಒಲಿಂಪಿಕ್ಸ್  ಕ್ರೀಡಾಕೂಟದ ವಾಲ್ಟ್ ನಲ್ಲಿ ಫೈನಲ್‍ಗೆ ಅರ್ಹತೆ ಪಡೆಯುವ ಮೂಲಕ ಭಾರತೀಯ ಕ್ರೀಡಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.   ಇಲ್ಲಿ ನಡೆದ ಅರ್ಹತಾ ಸುತ್ತಿನಲ್ಲಿ 8ನೇ ಸ್ಥಾನ ಪಡೆದ ದೀಪಾ ವೈಯಕ್ತಿಕ ವಾಲ್ಟ್ ಫೈನಲ್‍ಗೆ ಅರ್ಹತೆ ಪಡೆದ ಭಾರತದ ಮೊಟ್ಟ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ತ್ರಿಪುರದ ಈ ಬಾಲೆ, ಪ್ರೋಡುನೊವಾ ವಾಲ್ಟ್ ನಲ್ಲಿ ಎರಡು ಪ್ರಯತ್ನಗಳ ನಂತರ 14.850 ಪಾಯಿಂಟ್‍ಗಳೊಂದಿಗೆ ಫೈನಲ್‍ಗೆ ಅರ್ಹತೆ ಪಡೆಯುವಲ್ಲಿ ಸಫಲರಾಗಿದ್ದು, ಭಾರತದ ಪದಕ ಬೇಟೆ ನಿರೀಕ್ಷೆಗೆ ಪುಷ್ಟಿ ನೀಡಿದೆ.  ಐದು ಉಪವಿಭಾಗಗಳ ಮೂರನೇ ಸುತ್ತಿನ ನಂತರ ದೀಪಾ ಆರನೇ ಸ್ಥಾನ ಗಳಿಸಿದರು. ಆದರೆ ಕೆನಡಾದ ಜಿಮ್ನಾಸ್ಟ್ ಪಟು ಶಾಲೋನ್ ಓಲ್ಸೆನ್ ಅವರು ಉತ್ತಮ ಸಾಧನೆಯೊಂದಿಗೆ 14.950 ಪಾಯಿಂಟ್‍ಗಳಿಂದ ಸಮಗ್ರ ಶ್ರೇಣಿ ಪಡೆದ ನಂತರ ದೀಪಾ  8ನೇ ಸ್ಥಾನಕ್ಕೆ ಇಳಿದರು. ದೀಪಾ ಪದಕದೊಂದಿಗೆ ಭಾರತದ ಕೀರ್ತಿಯನ್ನು ಬೆಳಗುವ ಆಶಾಭಾವನೆ ಕ್ರೀಡಾಪ್ರೇಮಿಗಳಲ್ಲಿ ಮನೆ ಮಾಡಿದೆ.  ಈ ಕ್ರೀಡೆಯಲ್ಲಿ ಉತ್ತರ ಕೊರೆಯಾದ ಜೊಂಗ್ ಉನ್ ಹಾಂಗೆ ದ್ವಿತೀಯ(15.683 ಪಾಯಿಂಟ್‍ಗಳು) ಹಾಗೂ ಸ್ವಿಟ್ಜರ್‍ಲೆಂಡನ್ ಗಿಯುಲಿಯಾ ಸ್ಟೇನ್‍ಗ್ರುಬೆರ್(15.266) ತೃತೀಯ ಸ್ಥಾನ ಪಡೆದಿದ್ದಾರೆ.

Facebook Comments

Sri Raghav

Admin