ಒಲಿಂಪಿಕ್ಸ್ ನಲ್ಲಿ ಸೋತ ಸೆರೆನಾ

ಈ ಸುದ್ದಿಯನ್ನು ಶೇರ್ ಮಾಡಿ

Serena

ರಿಯೋ ಡಿ ಜನೈರೋ,  ಆ.10-ಒಲಂಪಿಕ್ಸ್‍ನಲ್ಲಿ ಐದನೇ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದ ಅಮೆರಿಕದ ಟೆನ್ನಿಸ್ ಆಟಗಾರ್ತಿ ಅಗ್ರ ಶ್ರೇಯಾಂಕದ ಸೆರೆನಾ ವಿಲಿಯಮ್ಸ್ ಕನಸು ನುಚ್ಚು ನೂರಾಗಿದೆ.  ಸಿಂಗಲ್ ವಿಭಾಗದಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದ ಸೆರೆನಾ 6-4, 6-3 ಸೆಟ್‍ಗಳಿಂದ ಉಕ್ರೇನಿನ ಎಲಿನಾ ಸ್ವಿಟೋಲಿನಾ ಅವರಿಗೆ ಮಣಿದರು.  ಬಲತೋಳು ನೋವಿನಿಂದ ಬಳಲುತ್ತಿರುವ ಅಮೆರಿಕದ ಹಾಲಿ ಚಾಂಪಿಯನ್ ತಮಗಿಂತಲೂ 13 ವರ್ಷದ ಕಿರಿಯ ಆಟಗಾರ್ತಿಗೆ ಶರಣಾದರು.  ಸೆಮಿಫೈನಲ್‍ಗೆ ಅರ್ಹತೆ ಪಡೆದಿರುವ ಸ್ವಿಟೋಲಿನಾ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವ ಪೆಟ್ರಾ ಕ್ವಿಟೊವಾ ಅವರೊಂದಿಗೆ ಸೆಣಸಾಡಿದ್ದಾರೆ.

 

Facebook Comments

Sri Raghav

Admin