ಒಲಿಂಪಿಕ್ಸ್ : ಮೊದಲ ದಿನವೇ ಭಾರತೀಯ ಆರ್ಚರಿಗೆ ಅಗ್ನಿಪರೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

dgsgsfdgsgರಿಯೊ ಡಿ ಜೈನೆರೊ, ಆ.5– 2016ರ  ಒಲಿಂಪಿಕ್ಸ್ ನ ಆರಂಭಿಕ ದಿನವೇ ಭಾರತೀಯ ಆರ್ಚರಿಗಳಿಗೆ ಅಗ್ನಿಪರೀಕ್ಷೆ ಎದುರಾಗಿದೆ.  ಕಳೆದ  2012ರಲ್ಲಿ  ಲಂಡನ್‍ನಲ್ಲಿ ನಡೆದ ಒಲಿಂಪಿಕ್ಸ್‍ನಲ್ಲಿ ಅರ್ಹತಾ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದ  ಆರ್ಚರಿಗಳು ಈ ಬಾರಿ ಉತ್ತಮ ಪ್ರದರ್ಶನ ತೋರುವ ಹುಮ್ಮಸ್ಸಿನಲ್ಲಿದ್ದಾರೆ.  ಆದರೆ ಈ ಬಾರಿಯು ಭಾರತ ತಂಡದವರು ಅರ್ಹತಾ ಸುತ್ತಿನಲ್ಲಿ ಕೊರಿಯನ್ಸ್ , ಮೆಕ್ಸಿಕಾನ್ಸ್ ಮತ್ತು ಇಟಲಿನ್ ದೇಶದ ಆರ್ಚರಿಗಳ ಸವಾಲನ್ನು ಎದುರಿಸಲಿದ್ದಾರೆ.   ಈ ಬಾರಿಯ ಒಲಿಂಪಿಕ್ಸ್‍ನಲ್ಲಿ  ಆರ್ಚರಿಗಳು ಉತ್ತಮ ಪ್ರದರ್ಶನ ನೀಡುವ  ಸಲುವಾಗಿಯೇ 15 ದಿನಗಳ ಮುಂಚೆಯೇ ರಿಯೊಗೆ ಆಗಮಿಸಿದ್ದು ಕಠಿಣ ಅಭ್ಯಾಸವನ್ನು  ನಡೆಸಿದ್ದಾರೆ.
ಆರ್ಚರಿ ವಿಭಾಗದಲ್ಲಿ ಮೂರನೆ ಬಾರಿ ಒಲಿಂಪಿಕ್ಸ್‍ನಲ್ಲಿ ಪಾಲ್ಗೊಳ್ಳುತ್ತಿರುವ ಬೊಮ್ಮಾಲ ದೇವಿ, ವಿಶ್ವದ ನಂಬರ್  ಒನ್ ಅಥ್ಲೀಟ್ಸ್ ದೀಪಿಕಾ ಕುಮಾರಿ ಹಾಗೂ ಲಕ್ಷ್ಮಿರಾಣಿ ಮಂಜಿಲ್ ಅವರ ಅನುಭವದಿಂದ ಭಾರತದ ಮಹಿಳಾ ವಿಭಾಗದ ಆರ್ಚರಿ ತಂಡವು ಕನಿಷ್ಠ ಒಂದು ಪದಕವನ್ನಾದರೂ ಗೆದ್ದೇ ಗೆಲ್ಲುತ್ತದೆ ಎಂಬ ನಂಬಿಕೆಯನ್ನು ಮೂಡಿಸಿದೆ.
ಮೊದಲ ದಿನ ಆರ್ಚರಿ ವಿಭಾಗದಲ್ಲಿ ಭಾರತ:
ಪುರುಷರ ವೈಯಕ್ತಿಕ ರ್ಯಾಂಕಿಂಗ್ ಸುತ್ತು, ಸಮಯ: ಸಂಜೆ 5.30ರ ನಂತರ, ಅಥ್ಲೀಟ್: ಅಂತಾನೂದಾಸ್ , ಸ್ಥಳ: ಸ್ಯಾಬೊದಾರೋಮಾ
ಮುಂದಿನ ಸುತ್ತು ಆಗಸ್ಟ್ 8
ಮಹಿಳೆಯರ ವೈಯಕ್ತಿಕ ರ್ಯಾಂಕಿಂಗ್ ಸುತ್ತು , ಸಮಯ: ರಾತ್ರಿ 9.30ರ ನಂತರ ಅಥ್ಲೀಟ್: ಬೊಮ್ಮಾಲದೇವಿ, ಲಕ್ಷ್ಮೀರಾಣಿ ಮಂಜ್ಲಿ , ದೀಪಿಕಾ ಕುಮಾರಿ, ಸ್ಥಳ: ಸ್ಯಾಬೊದಾರೋಮಾ
ಮುಂದಿನ ಸುತ್ತು ಆಗಸ್ಟ್ 11
ಮಹಿಳೆಯರ ಟೀಂ  ರ್ಯಾಂಕಿಂಗ್ ಸುತ್ತು, ಸಮಯ: ರಾತ್ರಿ 9.30ರ ನಂತರ: ಅಥ್ಲೀಟ್ಸ್: ಬೊಮ್ಮಾಲದೇವಿ, ಲಕ್ಷ್ಮೀರಾಣಿ ಮಂಜ್ಲಿ , ದೀಪಿಕಾ ಕುಮಾರಿ, ಸ್ಥಳ: ಸ್ಯಾಬೊದಾರೋಮಾ
ಮುಂದಿನ ಸುತ್ತು ಆಗಸ್ಟ್ 7.

Facebook Comments

Sri Raghav

Admin