ಒಳ ಮೀಸಲಾತಿ ನೀಡುವಂತೆ ಸವಿತಾ ಸಮಾಜ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

belur

ಬೇಲೂರು, ಆ.24- ಸವಿತಾ ಸಮಾಜಕ್ಕೆ ಸರ್ಕಾರ ಒಳ ಮಿಸಲಾತಿಯನ್ನು ನೀಡಬೇಕು ಎಂದು ಸವಿತಾ ಸಮಾಜದ ಹಾಸನಜಿಲ್ಲಾಧ್ಯಕ್ಷ ರವಿಕುಮಾರ್ ಆಗ್ರಹಿಸಿದರು. ಪಟ್ಟಣದಲ್ಲಿ ನಡೆದ ಬೇಲೂರು ತಾಲ್ಲೂಕು ಸವಿತಾ ಸಮಾಜದ ನೂತನ ಪದಧಿಕಾರಿಗಳ ಪದಗ್ರಹಣ ಹಾಗೂ ಸವಿತಾಸಮಾಜ ಮಹಿಳಾ ಘಟಕದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸವಿತಾ ಸಮಾಜವನ್ನು ಸರ್ಕಾರ ಪ್ರವರ್ಗ 2ಅ ಗೆ ಸೇರಿಸಿದ್ದು ಪ್ರವರ್ಗ 2ಅನಲ್ಲಿ 150ಕ್ಕೂ ಅಧಿಕ ಜಾತಿಗಳು ಬರುವುದರಿಂದ ಸವಿತಾ ಸಮಾಜ ಸರ್ಕಾರದ ಸವಲತ್ತುಗಳನ್ನು ಪಡೆಯುವುದರಲ್ಲಿ ಹಿಂದುಳಿದಿದೆ ಹಾಗೂ ಸವಿತಾ ಸಮಾಜವು ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದರಲ್ಲದೆ ಸವಿತಾ ಸಮಾಜದ ಮಕ್ಕಳಿಗೆ ಸರ್ಕಾರದ ವತಿಯಿಂದ ವರ್ಷಕ್ಕೆ 40 ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದರ ಜೋತೆಗೆ ನಾದಸ್ವರ ಮತ್ತು ಡೋಲು ಬಡಿಯುವ ಕಲೆಯನ್ನು ಕಲಿಸಲಾಗುತ್ತಿದ್ದು ಇದರ ಸದುಪಯೋಗವನ್ನು ಸವಿತಾ ಸಮಾಜದವರು ಪಡೆದುಕೊಳ್ಳಬೇಕು ಎಂದರು
ಬೇಲೂರು ಪುರಸಭಾ ಆರೋಗ್ಯಧಿಕಾರಿ ವೆಂಕಟೇಶ್ ಸವಿತಾ ಸಮಾಜದ ಜನರಿಗೆ ಬದಲಾವಣೆ ಅನಿವಾರ್ಯವಾಗಿದ್ದು ಸಂಘಟನೆ ಕೊರತೆ ಹಾಗೂ ಮೂಡನಂಬಿಕೆಗಳು ಬದಲಾವಣೆಗೆ ಅಡ್ಡಿಯಾಗಿವೆ ಆದ್ದರಿಂದ ಸವಿತಾ ಸಮಾಜದವರು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವುದರ ಮೂಲಕ ಶಿಕ್ಷಣಕ್ರಾಂತಿಯೊಂದಿಗೆ ಬದಲಾವಣೆಗೆ ಮುನ್ನುಡಿಯಾಗಬೇಕು ಎಂದರು. ಜಿಲ್ಲಾಗೌರವಾಧ್ಯಕ್ಷ ನಾಗೇಶ್,ಪ್ರಧಾನಕಾರ್ಯದರ್ಶಿಶಿವಣ್ಣ, ಬೇಲೂರು ತಾಲ್ಲೂಕು ಅಧ್ಯಕ್ಷ ನರಸಿಂಹಸ್ವಾಮಿ,ಗೌರವಾಧ್ಯಕ್ಷ ಚಂದ್ರು, ಉಪಾಧ್ಯಕ್ಷ ಮೋಹನ್,ವಿಷ್ಣುಪ್ರಸಾದ್, ತಾಲ್ಲೂಕು ಮಹಿಳಾಘಟಕದ ಅಧ್ಯಕ್ಷೆ ಸುಮಿತ್ರಾ, ಉಪಾಧ್ಯಕ್ಷೆ ಗೀತಾ,ಶೀಲಾ ಇನ್ನಿತರರು ಹಾಜರಿದರು.

► Follow us on –  Facebook / Twitter  / Google+

Facebook Comments

Sri Raghav

Admin