ಓಡಾಡುವ ಜಾಗಕ್ಕಾಗಿ ಬಿತ್ತು ಒಂದು ಹೆಣ, ಇಬ್ಬರು ಗಂಭೀರ

ಈ ಸುದ್ದಿಯನ್ನು ಶೇರ್ ಮಾಡಿ

Dead--01

ಮಳವಳ್ಳಿ,ಸೆ.19-ಮನೆಯ ಬಳಿ ಓಡಾಡುವ ದಾರಿ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಎರಡು ಕುಟುಂಬ ಗಳ ನಡುವಿನ ಜಗಳ ಒಬ್ಬರ ಕೊಲೆಯಲ್ಲಿ ಪರ್ಯವಸಾನಗೊಂಡಿರುವ ಘಟನೆ ಮಳವಳ್ಳಿ ತಾಲ್ಲೂಕು ಹಲಗೂರು ಹೋಬಳಿಯ ನಿಟ್ಟೂರು ಹೊಸದೊಡ್ಡಿ ಗ್ರಾಮದಲ್ಲಿ ನಡೆದಿದೆ. ನಾಗರಾಜು ಮತ್ತು ಚೆಲುವರಾಜು ಎರಡು ಮನೆಗಳ ನಡುವೆ ಓಡಾಡುವ ಜಾಗದ ವಿಷಯದಲ್ಲಿ ಎರಡೂ ಮನೆಗಳವರ ಮಧ್ಯೆ ಜಗಳ ಶುರುವಾಯಿತು. ಜಗಳ ತಾರಕಕ್ಕೇರಿ ಕೈ ಕೈ ಮಿಲಾಯಿಸಿದಾಗ 55 ವರ್ಷದ ನಾಗರಾಜು ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ತೀವ್ರ ಗಾಯಗಳಾಗಿವೆ ಎಂದು ವರದಿಯಾಗಿದೆ.

ನಾಗರಾಜ್ ಅವರ ಪತ್ನಿ ಗೌರಮ್ಮ(50)ಮತ್ತು ಮಗ ನಾರಾಯಣಸ್ವಾಮಿ (22) ಅವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿ ಚೆಲುವರಾಜುನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಮಲ್ಲಿಕ್ ಭೇಟಿ ನೀಡಿದ್ದು , ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin