ಓರಾಯನ್ ಮಾಲ್, ಇಟಿಎ ಮಾಲ್, ಮ್ಯಾರಿಯೇಟ್ ಹೊಟೇಲ್‌ ಒತ್ತುವರಿ ತೆರವಿಗೆ ಹೈಕೋರ್ಟ್ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

high-court
ಬೆಂಗಳೂರು, ಆ.29-ಪ್ರತಿಷ್ಠಿತ ಓರಾಯನ್ ಮಾಲ್, ಇಟಿಎ ಮಾಲ್, ಮ್ಯಾರಿಯೇಟ್ ಹೊಟೇಲ್‌ನಿಂದ ಒತ್ತುವರಿಯಾಗಿರುವ ಜಾಗ ವನ್ನು ಮೂರು ತಿಂಗಳೊಳಗೆ ತೆರವುಗೊಳಿಸಿ ಕ್ರಮಕೈಗೊಳ್ಳಬೇಕೆಂದು ಆದೇಶ ನೀಡಿರುವ ಹೈಕೋರ್ಟ್ ಈ ಸಂಬಂಧ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.  ಸಮರ್ಪಣಾ ಎಂಬ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಹಾಗೂ ರವಿ ಮಳಿಮಠ್ ಅವರ ವಿಭಾಗೀಯ ಪೀಠ ಮೂರು ಪ್ರತಿಷ್ಠಿತ ಸಂಸ್ಥೆಗಳವರು ಮಾಡಿರುವ ಒತ್ತುವರಿ ಜಾಗದ ತೆರವಿನ ಕುರಿತು ಮೂರು ತಿಂಗಳಲ್ಲಿ ಕ್ರಮಕೈಗೊಳ್ಳಬೇಕೆಂದು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದೆ.

ಸಮರ್ಪಣಾ ಪರ ವಕೀಲರಾದ ಮೋಹನ್ ಅವರು ಈ ಸಂಜೆಯೊಂದಿಗೆ ಮಾತನಾಡಿ, ಸರ್ಕಾರ ರಾಜಕಾಲುವೆ ಒತ್ತುವರಿ ತೆರವುಗೊಳಿಸುತ್ತಿದೆ. ಬಡ ಹಾಗೂ ಮಧ್ಯಮ ವರ್ಗದವರ ಮನೆಗಳು ನೆಲಸಮಗೊಳ್ಳುತ್ತಿವೆ. ಕಳೆದ 2011ರಲ್ಲಿ ಓರಾಯನ್ ಮಾಲ್, ಬಿನ್ನಿಮಿಲ್ ಬಳಿ ಇರುವ ಇಟಿಎ ಮಾಲ್, ಮ್ಯಾರಿಯೇಟ್ ಹೊಟೇಲ್ ಅವರು ರಾಜಕಾಲುವೆ ಒತ್ತುವರಿ ಮಾಡಿರುವುದರ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿತ್ತು. ಇದನ್ನು ತೆರವುಗೊಳಿಸಬೇಕೆಂದು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು.  ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ವಾಸ್ತವಾಂಶ ತಿಳಿದು ಒತ್ತುವರಿ ತೆರವು ಕುರಿತು ಕ್ರಮಕೈಗೊಳ್ಳಬೇಕೆಂದು ಸೂಚಿಸಿದೆ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin