ಓಲಾ ಕ್ಯಾಬ್ ಚಾಲಕನನ್ನು ಬೆದರಿಸಿ ಕಾರ್ ಸಮೇತ ದುಷ್ಕರ್ಮಿಗಳು ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

Ola
ಬೆಂಗಳೂರು, ಮೇ 27- ಡ್ರಾಪ್ ಕೊಡುವಂತೆ ಕೇಳಿ ಓಲಾ ಕ್ಯಾಬ್ ಹತ್ತಿದ ಇಬ್ಬರು ವ್ಯಕ್ತಿಗಳು ಚಾಲಕರಿಗೆ ಚಾಕು ತೋರಿಸಿ ಬೆದರಿಸಿ ಮೊಬೈಲ್ ಕಿತ್ತು ಕಾರ್ ಸಹಿತ ಪರಾರಿಯಾಗಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪುರುಷೋತ್ತಮ್ (40) ದರೋಡೆಗೆ ಒಳಗಾಗಿರುವ ಕ್ಯಾಬ್ ಚಾಲಕ.

ಬೆಳಗಿನ ಜಾವ ಸುಮಾರು 1.30ರಲ್ಲಿ ಪುರುಷೋತ್ತಮ್ ಸೋಮಪುರ, ನೈಸ್‍ರಸ್ತೆ, ಆರ್.ವಿ.ಆರ್ಕೆಡ್ ಬಳಿ ಟೋಲ್ ಸಮೀಪ ತಮ್ಮ ಓಲಾ ಕಾರು ನಿಲ್ಲಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಇಬ್ಬರು ಡ್ರಾಪ್ ನೀಡುವಂತೆ ಹೇಳಿ ಕಾರು ಹತ್ತಿದ್ದಾರೆ. ಕಾರು ಸ್ವಲ್ಪ ದೂರ ಹೋದ ನಂತರ ಚಾಕು ತೋರಿಸಿ ಪುರುಷೋತ್ತಮ್‍ನನ್ನು ಬೆದರಿಸಿ ಅವರ ಮೊಬೈಲ್ ಕಿತ್ತುಕೊಂಡು ಆತನನ್ನು ಕೆಳಕ್ಕಿಳಿಸಿ ಕಾರ್ ಸಹಿತ ಇಬ್ಬರು ಪರಾರಿಯಾಗಿದ್ದಾರೆ. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin