ಓಲಾ ಕ್ಯಾಬ್ ಬುಕ್ ಮಾಡಿ ಚಾಲಕನಿಂದ ಹಣ, ಮೊಬೈಲ್ ಸುಲಿಗೆ ಮಾಡುತ್ತಿದ್ದವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Ola-Cab

ಬೆಂಗಳೂರು,ನ.4-ಗ್ರಾಹಕರಂತೆ ಓಲಾ ಕ್ಯಾಬ್ ಬುಕ್ ಮಾಡಿ ಅವರಿದ್ದ ಸ್ಥಳಕ್ಕೆ ಕರೆಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಚಾಲಕನಿಗೆ ಬೆದರಿಸಿ ಹಣ, ಮೊಬೈಲ್ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದ ಮೂವರು ಸುಲಿಗೆಕೋರರನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.  ಶ್ರೀನಿವಾಸ(28), ಲಕ್ಷ್ಮಿ ನಾರಾಯಣ(27) ಮತ್ತು ರವಿಕುಮಾರ್(27) ಬಂಧಿತ ಸುಲಿಗೆಕೋರರಾಗಿದ್ದು ಇವರಿಂದ ಮೈಕ್ರೋಮ್ಯಾಕ್ಸ್ ಮೊಬೈಲ್, ಇಂಟೆಕ್ಸ್ ಮೊಬೈಲ್, ನೋಕಿಯೋ ಮೊಬೈಲ್, 1500 ನಗದು, ಸುಲಿಗೆಗೆ ಬಳಸಿದ್ದ ಟಾಟಾ ಇಂಡಿಕಾ ಕಾರು ಮತ್ತು ಚಾಕುವನ್ನು ವಶಪಡಿಸಿಕೊಂಡಿದ್ದಾರೆ.

ಅ.18ರಂದು ಸಂಜೆ 5.50ರಲ್ಲಿ ಮಾಗಡಿರಸ್ತೆ ಭಾರತ್ ನಗರದಿಂದ ಈ ಮೂವರು ಓಲಾ ಕ್ಯಾಬ್ನ್ನು ಬಾಡಿಗೆಗೆಂದು ಬುಕ್ ಮಾಡಿಕೊಂಡು ತಲಘಟ್ಟಪುರ ವ್ಯಾಪ್ತಿಯ ಕೆಂಗೇರಿ ಹೋಬಳಿ ಸೋಂಪುರ ಗ್ರಾಮ ಸ್ಕೈಕಿಂಗ್ ವಾಟರ್ ಪ್ಲಾಂಟ್ 46ನೇ ಕ್ರಾಸ್ಗೆ ಕರೆದೊಯ್ದು ಚಾಲಕನನ್ನು ಬೆದರಿಸಿ ಅವರಿಂದ 6 ಸಾವಿರ ಹಣ ಹಾಗೂ ಎರಡು ಮೊಬೈಲ್ನ್ನು ಕಿತ್ತುಕೊಂಡು ಅಲ್ಲಿಂದ ಟಾಟಾ ಇಂಡಿಕಾ ಕಾರಿನಲ್ಲಿ ಪರಾರಿಯಾಗಿದ್ದರು.  ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ತಲಘಟ್ಟಪುರ ಪೊಲೀಸರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ನಡೆಸಿದಾಗ ಮತ್ತೊಂದು ಸುಲಿಗೆ ಪ್ರಕರಣ ಬೆಳಕಿಗೆ ಬಂದಿದೆ.

ಈ ಆರೋಪಿಗಳು ಅಕ್ಟೋಬರ್ 12ರಂದು ಮಧ್ಯರಾತ್ರಿ ನಾಯಂಡಹಳ್ಳಿ ಬಸ್ ನಿಲ್ದಾಣದಿಂದ ಓಲಾ ಕ್ಯಾಬ್ ಬುಕ್ ಮಾಡಿ ಕೆಂಗೇರಿ ವ್ಯಾಪ್ತಿಗೆ ಕರೆದೊಯ್ದು ಚಾಲಕನಿಗೆ ಚಾಕುವಿನಿಂದ ಬೆದರಿಸಿ ಎರಡು ಮೊಬೈಲ್ಗಳನ್ನು ಕಿತ್ತುಕೊಂಡು ತಮ್ಮ ಇಂಡಿಕಾ ಕಾರಿನಲ್ಲಿ ಪರಾರಿಯಾಗಿದದ್ದು ವಿಚಾರಣೆಯಿಂದ ತಿಳಿದುಬಂದಿದೆ.  ಆರೋಪಿಗಳ ಬಂಧನದಿಂದ ತಲಘಟ್ಟಪುರ ಠಾಣೆಯ ಒಂದು ಸುಲಿಗೆ ಪ್ರಕರಣ, ಕೆಂಗೇರಿಯ ಒಂದು ಸುಲಿಗೆ ಪ್ರಕರಣ ಪತ್ತೆಯಾಗಿದೆ.  ಈ ಆರೋಪಿಗಳು ಗ್ರಾಹಕರಂತೆ ಓಲಾ ಕ್ಯಾಬ್ನ್ನು ಬುಕ್ ಮಾಡಿ ಅವರಿದ್ದ ಸ್ಥಳಕ್ಕೆ ಕ್ಯಾಬ್ ಕರೆಸಿಕೊಂಡು ಕ್ಯಾಬ್ನಲ್ಲಿ ಹತ್ತಿ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಚಾಲಕನನ್ನು ಬೆದರಿಸಿ ಮೊಬೈಲ್ಗಳನ್ನು ಕಿತ್ತುಕೊಂಡು ಅದರ ಸಿಮ್ಗಳನ್ನು ತೆಗೆದು ಚಾಲಕನಿಗೆ ನೀಡಿ ಅಲ್ಲಿಂದ ಪರಾರಿಯಾಗುವ ಪ್ರವೃತ್ತಿ ಹೊಂದಿದ್ದರು.  ದಕ್ಷಿಣ ವಿಭಾಗ ಉಪಪೊಲೀಸ್ ಆಯುಕ್ತ ಶರಣಪ್ಪ , ಸಹಾಯಕ ಪೊಲೀಸ್ ಕಮಿಷನರ್ ಮಂಜುನಾಥ್ ಚೌಧರಿ, ಇನ್ಸ್ಪೆಕ್ಟರ್ ರಾಮಪ್ಪ ಬಿ.ಗುತ್ತೇರ್ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin