ಓವರ್‍ಟೇಕ್ ಮಾಡಲು ಹೋಗಿ ಲಾರಿಗೆ ಕಾರ್ ಡಿಕ್ಕಿ : ಒಂದೇ ಕುಟುಂಬದ 5 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--5-Dead--01

ರಾಯಚೂರು, ಮೇ 20– ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೂರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐದು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ದಡೆಸುಗೂರು ಬಳಿ ನಡೆದಿದೆ. ಮೃತರನ್ನು ಗಂಗಾವತಿ ಮೂಲದ ಹುಸೇನ್ ಬಾಷ (35), ಅವರ ಪತ್ನಿ ಮುಲಾನ್ ಬಿ. (30), ಸಬೀನಾ (12), ಗುಲಾಬ್ ಷಾ (8) ಹಾಗೂ ಮೆಕೆಬೂಬ್ (3) ಎಂದು ಗುರುತಿಸಲಾಗಿದೆ.  ಇದೇ ವೇಳೆ ಗಾಯಗೊಂಡಿರುವ ಇಲಿಷಾ ಎಂಬ ಎಂಟು ವರ್ಷದ ಬಾಲಕಿಯನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ನಂತರ ಲಾರಿ ಚಾಲಕ ಮತ್ತು ಕ್ಲೀನರ್ ವಾಹನ ಬಿಟ್ಟು ಪರಾರಿಯಾಗಿದ್ದಾರೆ.ಘಟನೆ ವಿವರ:

ತಮಿಳುನಾಡು ಮೂಲದ ಲಾರಿಯೊಂದು ಕಳೆದ ರಾತ್ರಿ ಬಳ್ಳಾರಿ ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು. ಸುಮಾರು 2.30ರ ಸಂದರ್ಭದಲ್ಲಿ ಓವರ್‍ಟೇಕ್ ಮಾಡುವ ಭರದಲ್ಲಿ ಲಾರಿಯು ಎದುರಿಗೆ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.   ಒಳಗಿದ್ದವರು ಹೊರಬರಲಾಗದೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದೇ ಭಾಗದಲ್ಲಿ ಸಂಚರಿಸುತ್ತಿದ್ದ ಕೆಲ ವಾಹನ ಸವಾರರು ಮತ್ತು ಸ್ಥಳೀಯರು ಈ ಭೀಕರ ಘಟನೆ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Accident--5-Dead--02

ಸ್ಥಳಕ್ಕೆ ದಾವಿಸಿದ ಸಿಂಧನೂರು ಗ್ರಾಮಾಂತರ ಠಾಣೆ ಪೊಲೀಸರು ಕ್ರೇನ್ ಸಹಾಯದಿಂದ ಲಾರಿಯ ಕೆಳಭಾಗಕ್ಕೆ ನುಗ್ಗಿ ಜಖಂಗೊಂಡಿದ್ದನ್ನು ಹೊರತೆಗೆದು ನಜ್ಜುಗುಜ್ಜಾಗಿದ್ದ ಶವಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.  ಮೃತರ ಸಂಬಂಧಿಕರ ರೋದನ ಮುಗಿಲುಮುಟ್ಟಿದ್ದು, ಒಂದೇ ಕುಟುಂಬದ ಎಲ್ಲರೂ ಮೃತಪಟ್ಟಿರುವುದು ಸ್ವಗ್ರಾಮದಲ್ಲಿ ಶೋಕದ ವಾತಾವರಣ ಸೃಷ್ಟಿಯಾಗಿದೆ. ಇವರೆಲ್ಲರೂ ಸಿರಗುಪ್ಪಕ್ಕೆ ತೆರಳುತ್ತಿದ್ದರು ಎಂದು ತಿಳಿದುಬಂದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin