ಓವರ್ ಟೇಕ್ ತಂದ ಸಾವು : ಟಿಪ್ಪರ್’ಗೆ ಕಾರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಇಬ್ಬರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident-Chitradurga--01

ಚಿತ್ರದುರ್ಗ,ಏ.14- ಓವರ್ ಟೇಕ್ ಮಾಡುವ ಭರದಲ್ಲಿ ವೇಗವಾಗಿ ಚಲಿಸಿದ ಕಾರೊಂದು ಎದುರಿಗೆ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲ್ಲೂಕಿನ ಶ್ರೀ ರಂಗಪಟ್ಟಣದ ರಾಜ್ಯ ಹೆದ್ದಾರಿಯ ಗೊಲ್ಲಹಳ್ಳಿ ಬಳಿ ಇಂದು ಸಂಭವಿಸಿದೆ.  ತುಮಕೂರು ಮೂಲದ ಶಭಾನ್(50), ಹಜ್ಮಲ್ (35) ಮೃತಪಟ್ಟ ದುರ್ದೈವಿಗಳು. ಕಾರ್ಯ ನಿಮಿತ್ತ ಬಳ್ಳಾರಿಗೆ ತೆರಳಿ ಇಂದು ಬೆಳಗಿನ ಜಾವ 6.30ರ ಸಮಯದಲ್ಲಿ ತುಮಕೂರಿಗೆ ವಾಪಸ್ಸಾಗುತ್ತಿದ್ದ ಮುಂದೆ ಚಲಿಸುತ್ತಿದ್ದ ವಾಹನವನ್ನು ಓವರ್‍ಟೇಕ್ ಮಾಡಲು ಹೋದ ಚಾಲಕ ನಿಯಂತ್ರಣ ತಪ್ಪಿ ಎದುರಿಗೆ ಬಂದ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ ಮೂವರಿಗೆ ಗಾಯಗಳಾಗಿದ್ದು, ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಐಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin