ಔಷಧಿಗೂ ಜಗ್ಗದ ಟಿಬಿ ರೋಗ, ಭಾರತದಲ್ಲಿ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಳ

ಈ ಸುದ್ದಿಯನ್ನು ಶೇರ್ ಮಾಡಿ

TB-Affect

ನವದೆಹಲಿ, ಮೇ 11-ಔಷಧ ನಿರೋಧಕ (ಜಗ್ಗದ) ಶಕ್ತಿ ಇರುವ ಟಿಬಿ (ಕ್ಷಯ) ರೋಗ ಪ್ರಕರಣಗಳು ಭಾರತದಲ್ಲಿ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. 2040ರ ವೇಳೆಗೆ ದೇಶದಲ್ಲಿ 10 ಟಿಬಿ ಕೇಸ್‍ಗಳಲ್ಲಿ ಒಂದು ಔಷಧಿ ಪ್ರತಿರೋಧಕ ಪ್ರಕರಣವಾಗಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಫಿಲಿಪ್ಪೈನ್ಸ್, ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳಲ್ಲೂ ಇದೇ ಪರಿಸ್ಥಿತಿ ಎದುರಾಗಲಿದೆ ಎಂದು ಪ್ರಸಿದ್ಧ ವೈದ್ಯಕೀಯ ನಿಯತಕಾಲಿಕ ಲಾನ್ಸೆಟ್‍ನಲ್ಲಿ ಪ್ರಕಟವಾದ ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.

ರಷ್ಯಾದಲ್ಲಿ 2040ರ ವೇಳೆಗೆ 3ರಲ್ಲಿ ಒಂದು, ಭಾರತ ಮತ್ತು ಫಿಲಿಪ್ಪೈನ್ಸ್‍ನಲ್ಲಿ 10ರಲ್ಲಿ ಒಂದು ಹಾಗೂ ದಕ್ಷಿಣ ಆಫ್ರಿಕಾದಲ್ಲಿ 20ರಲ್ಲಿ ಒಂದು ಟಬಿ ಪ್ರಕರಣ ಔಷಧಿ-ಮಾತ್ರೆಗಳಿಗೆ ಜಗ್ಗವುದಿಲ್ಲ ಎಂದು ವರದಿ ತಿಳಿಸಿದೆ.   ಬ್ಯಾಕ್ಟೀರಿಯಾಗಳಿಂದ ಹರಡುವ ಈ ರೋಗಕ್ಕೆ ಆಂಟಿ-ಬಯೋಟಿಕ್ ನೀಡಲಾಗುತ್ತದೆ. ಆದರೆ ದೋಷಪೂರಿತ ಔಷಧಿ ಸೇವನೆ, ಚಿಕಿತ್ಸೆ ಅವಧಿ ಪೂರ್ಣಗೊಳ್ಳುವ ಮೊದಲೇ ಔಷಧಿ ನಿಲ್ಲಿಸುವಿಕೆ ಇತ್ಯಾದಿಯಿಂದ ಸೂಕ್ಷ್ಮಾಣುಗಳು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತವೆ ಎಂದು ವಿವರಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin