ಕಂಗನಾ ಈಗ ‘ದಿ ಕ್ವೀನ್ ಆಫ್ ಝಾನ್ಸಿ’

ಈ ಸುದ್ದಿಯನ್ನು ಶೇರ್ ಮಾಡಿ

Manikarnika-Kangana

ಕಂಗನಾ ರನಾವತ್-ರೂಪ ಮತ್ತು ಪ್ರತಿಭೆಯ ಅನ್ವರ್ಥನಾಮ. ದೊಡ್ಡ ತಾರೆಯರಿಗೆ ಸಡ್ಡು ಹೊಡೆಯುತ್ತಿರುವ ಕಾಶ್ಮೀರದ ಹುಡುಗಿಯ ಬಾಯಿ ಬೊಂಬಾಯಿ. ಗಂಡಸರನ್ನೇ ತಣ್ಣಗೆ ಮಾಡುವ ಜಗಳಗಂಟಿ (ಹೃತಿಕ್ ರೋಷನ್ ಪ್ರಕರಣ ಬೆಸ್ಟ್ ಎಕ್ಸಾಮ್‍ಪಲ್). ಈ ಗಂಡುಭೀರಿಗೆ ಈಗ ತಕ್ಕದಾದ ಪಾತ್ರವೇ ದೊರೆತಿದೆ. ಮುಂದಿನ ಚಿತ್ರದಲ್ಲಿ ಕಂಗನಾ ಝಾನ್ಸಿಯ ವೀರಾಗ್ರಣಿ-ಸಿನಿಮಾ ಹೆಸರು ಮಣಿಕರ್ಣಿಕಾ-ದಿ ಕ್ವೀನ್ ಆಫ್ ಝಾನ್ಸಿ. ಯಾವುದೇ ಸಿನಿಮಾ ಇರಲಿ ಕಂಗನಾ ಬದ್ಧತೆ ಮತ್ತು ಸಿದ್ದತೆಯಿಂದ ಪರಿಪೂರ್ಣವಾಗಿ ತಯಾರಾಗುತ್ತಾಳೆ. ಈ ಚಿತ್ರದಲ್ಲಿ ವೀರವನಿತೆಯ ಪಾತ್ರ ನಿರ್ವಹಿಸುತ್ತಿರುವ ಗುಂಗುರು ಕೂದಲಿನ ಈ ಚೆಲುವೆ ಕುದುರೆ ಸವಾರಿ ಮತ್ತು ಕತ್ತಿ ವರಸೆಯನ್ನು ಕಲಿಯುತ್ತಿದ್ದಾಳೆ.

ಬಾಲಿವುಡ್ ತಾರೆಯರಾದ ಜಕ್ವೆಲಿನ್ ಫರ್ನಾಂಡಿಸ್, ಸುಶಾಂತ್ ಸಿಂಗ್ ರಜಪೂತ್ ಮತ್ತು ಕೃತಿ ಸೊನೊನ್ ಅವರಿಗೆ ಹಾರ್ಸ್ ರೈಡಿಂಗ್ ಕಲಿಸಿರುವ ಸುರೇಶ್ ತಪುರಿಯಾ ಬಳಿ ಶ್ರದ್ದೆಯಿಂದ ತರಬೇತಿ ಪಡೆಯುತ್ತಿದ್ದಾಳೆ. ಮಣಿಕರ್ಣಿಕಾ ಚಿತ್ರದ ನಿರ್ದೇಶಕ ಕ್ರಿಶ್ ಹಾರ್ಸ್ ರೈಡರ್ ಟ್ರೈನರ್ ಸುರೇಶ್‍ರನ್ನು ಭೇಟಿ ಮಾಡಿ ಕಂಗನಾಳ ಪಾತ್ರ ಮತ್ತು ಸಾಹಸ ದೃಶ್ಯಗಳಲ್ಲಿ ಆಕೆಗೆ ಅಗತ್ಯವಾಗಿರುವ ಅಶ್ವರೋಹಣ ತರಬೇತಿ ನೀಡುವಂತೆ ತಿಳಿಸಿದ್ದಾರೆ. ಕಂಗನಾ ಈ ಸಿನಿಮಾ ಮೂಲಕ ಪದ್ಮಾವತಿಗೆ (ದೀಪಿಕಾ ಪಡುಕೋಣೆ) ಸಡ್ಡು ಹೊಡೆಯಲಿದ್ದಾಳೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin