ಕಂಗನಾ ಮತ್ತೆ ನಿನ್ನ ರಗಳೆನಾ..?

ಈ ಸುದ್ದಿಯನ್ನು ಶೇರ್ ಮಾಡಿ

Kangana-Ranaut

ಹೃತಿಕ್ ರೋಷನ್ ಮತ್ತು ಕಂಗನಾ ರನೌಟ್ ನಡುವೆ ಭುಗಿಲೆದ್ದ ರಸ ಬಾಲಿವುಡ್‍ನ ಅತ್ಯಂತ ಕೆಟ್ಟ ರಂಪ-ರಾದ್ಧಾಂತ ಎಂದೇ ಕುಖ್ಯಾತಿ ಪಡೆದಿರೋದು ನಿಮಗೆ ಗೊತ್ತೆ ಇದೆ. ಇವರಿಬ್ಬರ ನಡುವಣ ಲವ್ವಿ-ಡವ್ವಿ ಮುರಿದು ಬಿದ್ದ ನಂತರ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆದು ಸ್ಟಾರ್‍ವಾರ್‍ಗೆ ಎಡೆ ಮಾಡಿಕೊಟ್ಟಿತ್ತು. ತಮ್ಮ ಮಾಜಿ ಪ್ರಿಯಕರ ಹೃತಿಕ್‍ಗೆ ಲೀಗಲ್ ನೋಟಿಸ್ ಗುಜರಾಯಿಸಿದ್ದಳು. ಇಷ್ಟೆಲ್ಲ ಪೀಠಿಕೆಗೆ ಕಾರಣವೆಂದರೆ ಕಂಗನಾ ಮತ್ತೆ ಕ್ಯಾತೆ ತೆಗೆದಿದ್ದಾಳೆ. ಹೃತಿಕ್ ಹೆಸರನ್ನು ಪ್ರಸ್ತಾಪಿಸದೇ ಆತನನ್ನು ಕೆಣಕಿದ್ದಾಳೆ. ಲೀಗಲ್ ನೋಟಿಸ್ ಜಾರಿಗೊಳ್ಳುವುದಕ್ಕೆ ಮೊದಲು ನನಗೆ ಸಾಕಷ್ಟು ಬೆದರಿಕೆ ಕರೆಗಳು ಬಂದಿದ್ದವು. ಮಾಧ್ಯಮದವರೂ ಕೂಡ ನನ್ನ ವಿರುದ್ಧ ತಿರುಗಿಬಿದ್ದಿದ್ದರು.

ಹಿಂದಿಗಿಂತಲೂ ನಾನು ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದೆ. ನಾನು ನೋಟಿಸ್ ಜಾರಿಗೊಳಿಸುವುದಕ್ಕೂ ಮುನ್ನ ನನಗೆ ಮಾನಸಿಕವಾಗಿ ತುಂಬಾ ಹಿಂಸೆ ನೀಡಲಾಗಿತ್ತು. ಮಹಿಳೆಯರು ಒಳಗಾಗುವಂಥ ಒತ್ತಡಕ್ಕೆ ನಾನೂ ಕೂಡ ಸಿಲುಕಿದ್ದೆ. ಈ ಎಲ್ಲ ಕಾರಣಕ್ಕಾಗಿ ನಾನು ನೋಟಿಸ್ ಗುಜರಾತಿ ತಿರುಗಿಬಿದ್ದೆ ಎಂದು 30 ವರ್ಷದ ಗುಂಗುರು ಕೂದಲಿನ ಚೆಲುವೆ ಕಂಗನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾಳೆ. ಇವರಿಬ್ಬರ ಜಟಾಪಟಿ ಬಾಲಿವುಡ್‍ನಲ್ಲಿ ಸಾಕಷ್ಟು ತಿರುವುಗಳಿಗೆ ಕಾರಣವಾಗಿತ್ತು. ಒಂದು ಗುಂಪು ಹೃತಿಕ್ ಪರ ನಿಂತರೆ, ಇನ್ನೊಂದು ಗುಂಪು (ವಿದ್ಯಾಬಾಲನ್ ಮೊದಲಾದವರು) ಕಂಗನಾಳಿಗೆ ಬೆಂಬಲ ನೀಡಿತ್ತು. ಕ್ರಿಷ್-3 ಚಿತ್ರದಲ್ಲಿ ಇಬ್ಬರಿಬ್ಬರು ಒಟ್ಟಿಗೆ ನಟಿಸಿದ ನಂತರ ಸಂಬಂಧ ಹಳಸಿತ್ತು. ಪರಸ್ಪರ ಆರೋಪ-ಪ್ರತ್ಯಾರೋಪಗಳ ಸರಮಾಲೆಯೇ ನಡೆದರೂ ಇವರಿಬ್ಬರ ಶೀತಲ ಸಮರ ಮುಗಿದಂತೆ ಕಾಣುತ್ತಿಲ್ಲ.

 

► Follow us on –  Facebook / Twitter  / Google+

Facebook Comments

Sri Raghav

Admin