ಕಂಚು ಗೆದ್ದು ಕೋಟ್ಯಾಧೀಶಳಾದ ಕುಸ್ತಿಪಟು ಸಾಕ್ಷಿ ಮಲ್ಲಿಕ್

ಈ ಸುದ್ದಿಯನ್ನು ಶೇರ್ ಮಾಡಿ

Sakshai-malik

ರೋಟಕ್ (ಹರ್ಯಾಣ), ಆ.18- ರಿಯೋ ಒಲಂಪಿಕ್ಸ್ ನ 12ನೆ ದಿನದ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದು ಭಾರತದ ಮಾನ ಕಾಪಾಡಿರುವ ರೋಟಕ್ನ ಸಾಕ್ಷಿ ಮಲ್ಲಿಕ್ ಇನ್ನು ಮುಂದೆ ಕೋಟ್ಯಾಧೀಶ್ವರಳಾಗಲಿದ್ದಾಳೆ. ಬಹುಮಾನ ಮತ್ತು ಪುರಸ್ಕಾರಗಳ ಮಹಾಪೂರವೇ ಆಕೆಯತ್ತ ಹರಿದುಬರುತ್ತಿದೆ.   ಹರ್ಯಾಣ ರಾಜ್ಯ ಸರ್ಕಾರವು 2 ಕೋಟಿ ರೂ. ನಗದು ಬಹುಮಾನ ಮತ್ತು ರಾಜ್ಯ ಸರ್ಕಾರ ದೊಡ್ಡ ನಿವೇಶನದ ಪುರಸ್ಕಾರವನ್ನು ಘೋಷಿಸಿದೆ. ಭಾರತೀಯ ರೈಲ್ವೆಯ ಉದ್ಯೋಗಿ 50 ಲಕ್ಷ ರೂ.ಗಳನ್ನು ನೀಡುವುದಾಗಿ ರೈಲ್ವೆ ಇಲಾಖೆ ಪ್ರಕಟಿಸಿದೆ.  ಇದಲ್ಲದೆ, ಭಾರತ ಒಲಂಪಿಕ್ ಸಂಸ್ಥೆ 20 ಲಕ್ಷ ರೂ. ನಗದು ಬಹುಮಾನ ನೀಡಲಿದೆ. ಬಾಲಿವುಡ್ ನಟ ಮತ್ತು ಒಲಂಪಿಕ್ ಕ್ರೀಡಾಕೂಟದ ಭಾರತದ ರಾಯಭಾರಿ ಸಲ್ಮಾನ್ಖಾನ್ ಎಲ್ಲ ಕ್ರೀಡಾಪಟುಗಳಿಗೆ ತಲಾ 1,01,000ರೂ. ನಗದನ್ನು ಈಗಾಗಲೇ ಘೋಷಿಸಿದ್ದು, ಪದಕ ವಿಜೇತ ಸಾಕ್ಷಿಗೆ ಆ ಮೊತ್ತವನ್ನು ಇನ್ನಷ್ಟು ಹೆಚ್ಚಿಸಲಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin