ಕಂಟೈನರ್ ವಾಹನಗಳಲ್ಲಿ 60ಕ್ಕೂ ಹೆಚ್ಚು ಎತ್ತುಗಳನ್ನು ಸಾಗಿಸುತ್ತಿದ್ದ ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

tmkur
ತುಮಕೂರು, ಜ.22-ಕಂಟೈನರ್ ವಾಹನಗಳಲ್ಲಿ 60ಕ್ಕೂ ಹೆಚ್ಚು ಎತ್ತುಗಳನ್ನು ಸಾಗಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಕಂಟೈನರ್ ಚಾಲಕ ಹಾಗೂ ಕ್ಲೀನರ್‍ನನ್ನು ಬಂಧಿಸಲಾಗಿದೆ.  ಇಂದು ಬೆಳಗ್ಗೆ 9 ಗಂಟೆ ಸಮಯದಲ್ಲಿ ತಮಿಳುನಾಡು ಹಾಗೂ ಭುವನೇಶ್ವರ್‍ಗೆ ಕಂಟೈನರ್ ವಾಹನದಲ್ಲಿ 60ಕ್ಕೂ ಹೆಚ್ಚು ಎತ್ತುಗಳು, ಹಸುಗಳು, ಎಮ್ಮೆಗಳು ಸೇರಿದಂತೆ ಸೀಮೆ ಹಸುವಿನ ಕರುಗಳನ್ನು ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್ ಅವರ ಮಾರ್ಗದರ್ಶನದಲ್ಲಿ ಎರಡು ತಂಡಗಳನ್ನು ರಚಿಸಿ ನಾಗವಲ್ಲಿ ಮತ್ತು ಹೊನ್ನುಡಿಕೆ ಮುಖ್ಯರಸ್ತೆಯ ಜಿಲ್ಲಾಂಗರ್ ದಿಂಬ ಎಂಬ ಗ್ರಾಮದ ಬಳಿ ವಾಹನವನ್ನು ತಡೆದು ತಪಾಸಣೆಗೊಳಪಡಿಸಿದಾಗ ಜಾನುವಾರುಗಳನ್ನು ಸಾಗಿಸುತ್ತಿದ್ದುದು ಕಂಡು ಬಂದಿದೆ.
ಈ ವೇಳೆ ವಾಹನದಲ್ಲಿದ್ದವರನ್ನು ಹಿಡಿಯಲು ಯತ್ನಿಸಿದಾಗ ಇದರ ಪ್ರಮುಖ ರೂವಾರಿ ಮುನ್ನಾ ತಪ್ಪಿಸಿಕೊಂಡಿದ್ದು, ಲಾರಿ ಚಾಲಕ-ಕ್ಲೀನರ್‍ನನ್ನು ಬಂಧಿಸಲಾಗಿದೆ.
ಗುಬ್ಬಿ ತಾಲೂಕು, ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಸೇರಿದಂತೆ ವಿವಿಧ ಕಡೆಯಿಂದ ನೂರಾರು ಜಾನುವಾರುಗಳನ್ನು ಖರೀದಿಸಿ ನಾಲ್ಕು ಕಂಟೈನರ್‍ಗಳಲ್ಲಿ ತಮಿಳುನಾಡು ಹಾಗೂ ಭುವನೇಶ್ವರ್‍ಗೆ ನಿರಂತರವಾಗಿ ಸರಬರಾಜು ಮಾಡುತ್ತಿದ್ದುದಾಗಿ ಚಾಲಕ ಬಾಯಿಬಿಟ್ಟಿದ್ದಾನೆ.  ಈ ವಾಹನವೇ ಅಲ್ಲದೆ ಇನ್ನೂ ಮೂರು ವಾಹನಗಳು ತಮ್ಮ ಹಿಂದೆ ಬರುತ್ತಿವೆ ಎಂದು ತಿಳಿಸಿದ್ದು, ವಾಹನಗಳು ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.  ಈ ದಂಧೆಯನ್ನು ಹಿಡಿಯಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರಾರೂ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಕ್ಯಾತಸಂದ್ರ ಹಾಗೂ ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳ ಮಾರ್ಗದಲ್ಲಿ ಸಾಗಿಸುತ್ತಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.  ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್‍ಪೆಕ್ಟರ್ ಗೌತಮ್ ಹಾಗೂ ಸಿಬ್ಬಂದಿಗಳಾದ ಅಯುಬ್ ಜಾನ್, ಮಲ್ಲೇಶ್ ಸೇರಿದಂತೆ ಕಾರ್ಯಾಚರಣೆಯಲ್ಲಿ ತೊಡಗಿದ್ದು ತಪ್ಪಿಸಿಕೊಂಡ ಲಾರಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಹೆಬ್ಬಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin