ಕಂಠಪೂರ್ತಿ ಕಿಡಿದಿದ್ದ ಗುಜರಾತ್ ಉಪ ಮುಖ್ಯಮಂತ್ರಿ ಮಗನಿಗೆ ವಿಮಾನಯಾನ ನಿರಾಕರಣೆ

ಈ ಸುದ್ದಿಯನ್ನು ಶೇರ್ ಮಾಡಿ

Nitin-patel

ಅಹಮದಾಬಾದ್, ಮೇ 9-ಕಂಠಪೂರ್ತಿ ಮದ್ಯ ಸೇವಿಸಿ ಓಲಾಡುತ್ತಿದ್ದ ಗುಜರಾತ್ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಪುತ್ರ ಜೈಮಾನ್ ಪಟೇಲ್‍ಗೆ ವಿಮಾನ ಏರಲು ಕತ್ತರ್ ಏರ್‍ಲೈನ್ಸ್ ಸಿಬ್ಬಂದಿ ಅನುಮತಿ ನಿರಾಕರಿಸಿದ ಘಟನೆ ವರದಿಯಾಗಿದೆ.  ಜೈಮಾನ್ ಪಟೇಲ್, ತನ್ನ ಪತ್ನಿ ಝಲಕ್ ಮತ್ತು ಪುತ್ರಿ ವೈಶವಿ ಜೊತೆ ಕತ್ತರ್ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು. ರಜಾ ದಿನಗಳನ್ನು ಮಜವಾಗಿ ಕಳೆಯಲು ಈ ಕುಟುಂಬ ಗ್ರೀಸ್ ಪ್ರವಾಸ ಹೊರಟ್ಟಿದ್ದರು. ಮುಂಜಾನೆ 4 ಗಂಟೆಗೆ ವಿಮಾನ ಹೊರಡಬೇಕಿತ್ತು. ಇದೇ ವೇಳೆ ಏರ್‍ಪೋರ್ಟ್‍ಗೆ ಆಗಮಿಸಿದ್ದ ಜೈಮಾನ್ ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದ ಅವನಿಗೆ ನಡೆಯಲು ಸಹ ಆಗುತ್ತಿರಲಿಲ್ಲ.ವಿಮಾನ ಏರಲು ತಡೆದಾಗ ಸಿಬ್ಬಂದಿಯೊಂದಿಗೆ ಕುಟುಂಬ ಸದಸ್ಯರು ವಾಗ್ವಾದಕ್ಕಿಳಿದರು. ಇದರಿಂದ ಅಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ತಮ್ಮ ಪುತ್ರನನ್ನು ಸಮರ್ಥಿಸಿಕೊಂಡ ಡೆಪ್ಯುಟಿ ಸಿಎಂ ಪಟೇಲರು, ಇದು ತಮ್ಮ ಕುಟುಂಬದ ಘನತೆಗೆ ಚ್ಯುತಿ ಉಂಟು ಮಾಡಲು ನಡೆದಿರುವ ಸಂಚಾಗಿದೆ ಎಂದು ಆಪಾದಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin