ಕಂಠೀರವ ಉದ್ಯಾನಕ್ಕೆ ಜನಸಾಗರ

ಈ ಸುದ್ದಿಯನ್ನು ಶೇರ್ ಮಾಡಿ

Park

ಬೆಂಗಳೂರು, ಆ.22- ಉದ್ಯಾನನಗರಿ ಖ್ಯಾತಿಯ ಬೆಂಗಳೂರಿಗೆ ಮುಕುಟ ಪ್ರಾಯದಂತಿರುವ ರಣಧೀರ ಕಂಠೀರವ ಉದ್ಯಾನವನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಆ.6ರಂದು ಯಡಿಯೂರು ವಾರ್ಡ್ನಲ್ಲಿ ಲೋಕಾರ್ಪಣೆಗೊಂಡ ರಣಧೀರ ಕಂಠೀರವ ಉದ್ಯಾನವನಕ್ಕೆ ಇದುವರೆಗೂ 80,000 ಮಂದಿ ಭೇಟಿ ನೀಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಕನ್ನಡ ನಾಡಿನ 2300 ವರ್ಷಗಳ ಭವ್ಯ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ರೂಪಿಸಲಾಗಿರುವ ಈ ಉದ್ಯಾನವನ ದಿನೇ ದಿನೇ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಕನ್ನಡ ನಾಡನ್ನು ಆಳಿದ ರಾಜ-ಮಹಾರಾಜರ ಶಿಲ್ಪಿ ಮತ್ತು ನಾಡು-ನುಡಿಗೆ ಅವರು ಸಲ್ಲಿಸಿದ ಸೇವೆಯನ್ನು ಕೆತ್ತಲ್ಪಟ್ಟಿರುವ ಕಂಠೀರವ ಉದ್ಯಾನವನಕ್ಕೆ ವೀಕೆಂಡ್ಗಳಲ್ಲಿ ಜನಸಾಗರವೇ ಹರಿದು ಬರುತ್ತಿದೆ.  ಅತ್ಯಂತ ಕಡಿಮೆ ಅವಧಿಯಲ್ಲೇ ಬೃಹತ್ ಪ್ರಮಾಣದ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸು ತ್ತಿರುವುದು ರಣಧೀರ ಕಂಠೀರವ ಉದ್ಯಾನವನದ ಹೆಗ್ಗಳಿಕೆಯಾಗಿದೆ.

Facebook Comments

Sri Raghav

Admin