ಕಂದಕಕ್ಕೆ ಬಿದ್ದು ಮೇಲಕ್ಕೆ ಬರಲಾಗದೆ ನರಳಾಡಿ ಪ್ರಾಣಬಿಟ್ಟ ಆನೆ

ಈ ಸುದ್ದಿಯನ್ನು ಶೇರ್ ಮಾಡಿ

Elephant--01

ಮೈಸೂರು, ಮೇ 4- ಕಂದಕಕ್ಕೆ ಬಿದ್ದು ನರಳಾಡಿ ಆನೆಯೊಂದು ಮೃತಪಟ್ಟಿರುವ ಘಟನೆ ಎಚ್.ಡಿ.ಕೋಟೆ ದಮ್ಮನಕಟ್ಟಿ ಹಾಡಿ ಬಳಿ ನಡೆದಿದೆ.ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಗ್ರಾಮದತ್ತ ಬಂದಿದ್ದ ಒಂಟಿ ಸಲಗ ಕಂದಕಕ್ಕೆ ಬಿದ್ದಿತ್ತು. ಬೆಳಗ್ಗೆ ಗ್ರಾಮಸ್ಥರು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಆದರೆ ಬಿದ್ದ ರಭಸಕ್ಕೆ ಆನೆಯ ಕಾಲು ಹಾಗೂ ದಂತ ಮಣ್ಣಿನಲ್ಲಿ ಹೂತು ಕೊಂಡಿತ್ತು. ಎಷ್ಟೇ ಪ್ರಯಾಸಪಟ್ಟರು ಅದನ್ನು ಮೇಲೆತ್ತಲು ಸಾಧ್ಯವಾಗಲಿಲ್ಲ. ನರಳಿ ಅದು ಕೊನೆಯುಸಿರೆಳೆದಿದೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಸಿ.ಪೂವಯ್ಯ ಅವರು ವೈದ್ಯರೊಂದಿಗೆ ಸ್ಥಳಕ್ಕಾಗಮಿಸಿ ನಂತರ ವೈದ್ಯರನ್ನು ಕರೆಸಿ ಪರೀಕ್ಷೆ ನಡೆಸಿದಾಗ ಆನೆಗೆ ಹೃದಯಾಘಾತವಾಗಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಬೃಹತ್ ಗಾತ್ರದ ಈ ಒಂಟಿ ಸಲಗ ಆಗಾಗ ಗ್ರಾಮದಂಚಿನಿಂದ ಬರುತ್ತಿತ್ತು. ಮತ್ತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಆದರೆ ನಿನ್ನೆ ರಾತ್ರಿ ಕತ್ತಲಲ್ಲಿ ಬಂದು ದಾರಿ ಕಾಣದೆ ಆಳವಾದ ಕಂದಕಕ್ಕೆ ಬಿದ್ದು ಮೃತಪಟ್ಟಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin