ಕಂಪ್ಯೂಟರ್‍ನಿಂದಲೂ ಸಂಭವಿಸಬಹುದು ಇಂಜ್ಯುರಿ..!

ಈ ಸುದ್ದಿಯನ್ನು ಶೇರ್ ಮಾಡಿ

Computeor-injury

ಆಧುನಿಕ ಯುಗದಲ್ಲಿ ಅತ್ಯಾವಶ್ಯಕ ಸಾಧನಗಳಲ್ಲಿ ಒಂದಾಗಿರುವ ಕಂಪ್ಯೂಟರ್ ಎಲ್ಲಾ ರಂಗಗಳನ್ನು ಆಕ್ರಮಿಸಿದೆ. ಇಂತಹ ಅತ್ಯಗತ್ಯ ಸಾಧನ ಕೇವಲ ಸಾಧನವಾಗಿರದೆ ಮಾಹಿತಿ ಕಣಜವಾಗಿದ್ದು, ಇದರಿಂದ ಇರುವ ನಾನಾ ಉಪಯೋಗಗಳ ನಡುವೆ ಇದರ ಬಳಕೆಯಲ್ಲಿನ ನ್ಯೂನ್ಯತೆಗಳಿಂದಾಗಿ ಉಂಟಾಗಬಹುದಾದ ಆರೋಗ್ಯ ಸಂಬಂಧಿತ ಸಮಸ್ಯೆಗಳು ಗೋಚರಿಸುತ್ತಿಲ್ಲ.
ಆದರೆ ದೀರ್ಘ ಕಾಲಾವಧಿಯಲ್ಲಿ ಕಂಪ್ಯೂಟರ್‍ಗಳನ್ನು ಸೂಕ್ತ ರೀತಿಯಲ್ಲಿ ಬಳಸದೆ ಹೋದಾಗ ಲಾಭಕ್ಕಿಂತ ಆರೋಗ್ಯದಲ್ಲಿ ಉಂಟಾಗುವ ನಷ್ಟವೇ ಹೆಚ್ಚು. ಅದರಲ್ಲಿ ಪ್ರಮುಖವಾಗಿ ಕಂಪ್ಯೂಟರ್ ಮುಂದೆ ದೀರ್ಘ ಕಾಲ ಕಾರ್ಯ ನಿರ್ವಹಿಸುವುದರಿಂದ ಕಣ್ಣುಗಳು, ಕುತ್ತಿಗೆ, ಬೆನ್ನಿನಲ್ಲಿ ಒತ್ತಡ, ಆಯಾಸ ಹಾಗೂ ಅನೇಕರಲ್ಲಿ ಕೈಗಳು ಪ್ರಾಯೋಗಿಕವಾಗಿ ಕೆಲಸ ಮಾಡದಿರುವ ಬಗ್ಗೆ ಸಾಕಷ್ಟು ವರದಿಗಳಾಗಿವೆ. ಕಂಪ್ಯೂಟರ್ ಮುಂದೆ ಅವೈಜ್ಞಾನಿಕ ಶೈಲಿಯಲ್ಲಿ ಕೆಲಸ ಮಾಡುವುದು ಆರೋಗ್ಯಕ್ಕೆ ಹಾನಿಕರ ಮಾತ್ರವಲ್ಲ, ಕ್ರಿಯಾಶೀಲತೆಯನ್ನು ಕಸಿಯುವ ಭೀತಿಯೂ ಇಲ್ಲದಿಲ್ಲ.

ಕೆಲವೊಂದು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದರ ಮೂಲಕ ಕಂಪ್ಯೂಟರ್ ಎಂಬ ಅತಿ ಮುಖ್ಯ ಸಾಧನವನ್ನು ಮತ್ತಷ್ಟು ಸ್ನೇಹಿಯಾಗಿ ಮಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಇದಕ್ಕೆ ಕೆಲವೊಂದು ಸೂತ್ರಗಳನ್ನು ಅನುಸರಿಸುವುದನ್ನು ಮರೆಯದಿರಿ.

ಸುರಕ್ಷತಾ ಕ್ರಮಗಳು:

  • ಕಂಪ್ಯೂಟರ್ ಕೀಗಳನ್ನು ನೋಡಿ ಟೈಪ್ ಮಾಡದೆ ಟಚ್ ಟೈಪಿಂಗ್ ಕೌಶಲ್ಯವನ್ನು ಕಲಿತು ಅನುಷ್ಠಾನಗೊಳಿಸಿ.
  • ಕೀ ಬೋರ್ಡ್ ಅಥವಾ ಮೌಸ್‍ನ್ನು ಡೆಸ್ಕ್ ಮೇಲೆ ಇರಿಸಬೇಡಿ. ಅವುಗಳನ್ನು ಕೀ ಬೋರ್ಡ್ ಡ್ರಾಯರ್‍ನಲ್ಲಿ ಇಡಿ.
  • ತೀಕ್ಷ್ಣವಾದ ತುದಿಗಳ ಮೇಲೆ ನಿಮ್ಮ ಕೈಗಳನ್ನು ಇಡಬೇಡಿ. ಕುಷನ್ ಬಾರ್‍ಗಳ ಮೇಲೆ ಇಡಿ.
  • ಕಂಪ್ಯೂಟರ್‍ನಲ್ಲಿ ಕೆಲಸ ಮಾಡುವಾಗ ಕೈಗಡಿಯಾರ ಧರಿಸಬೇಡಿ.
  • ಉದ್ದನೆಯ ಉಗುರುಗಳನ್ನು ಕತ್ತರಿಸದಿದ್ದರೆÉ ಟೈಪಿಂಗ್‍ಗೆ ತೊಂದರೆಯಾಗುವುದರ ಜೊತೆಗೆ ನಿಖರತೆ ಮಟ್ಟಕ್ಕೆ ಹಾನಿಯಾಗುತ್ತದೆ.
  • ಟೈಪ್ ಮಾಡಬೇಕಾದ ವಿಷಯಗಳನ್ನು ಡೆಸ್ಕ್‍ನ ಸಮತಟ್ಟಾದ ಜಾಗದಲ್ಲಿ ಇರಿಸಬೇಡಿ. ಹ್ಯಾಂಗಿಂಗ್ ಪ್ಯಾಡ್ ಬಳಸಿ. ಅದನ್ನು ನಿಮ್ಮ ಕಣ್ಣಿನ ನೇರಕ್ಕೆ ಇಡಿ.
  • ರಿವಾಲ್ವಿಂಗ್ ಚೇರ್ ಅಥವಾ ಸ್ಟೂಲ್‍ನನ್ನು ಬಳಸಬೇಡಿ. ಯಾವುದೇ ಫಿಕ್ಸ್ಡ್ ಚೇರ್ ಬಳಸಿ.
  • ಮಾನಿಟರ್‍ನನ್ನು ಒಂದು ತೋಳಿನ ಅಂತರದಲ್ಲಿ ಇರಿಸಬೇಕು.
  • ಮಾನಿಟರ್ ಮೇಲೆ ಯಾವುದೇ ಪ್ರತಿಫಲನವಿರುವುದನ್ನು ತಪ್ಪಿಸುವುದರಿಂದ ಕಣ್ಣಿನ ದೋಷದಂತಹ ಸಮಸ್ಯೆದಿಂದ ದೂರಾಗಬಹುದು.
  • ಪ್ರತಿ 20 ನಿಮಿಷಕ್ಕೊಮ್ಮೆ ಅಥವಾ 20 ಸೆಕೆಂಡ್‍ಗಳ ಕಾಲ ಮೈಕ್ರೋ-ಬ್ರೇಕ್ ವಿಶ್ರಾಂತಿ ಪಡೆಯಿರಿ ಹಾಗೂ ಸಾಕಷ್ಟು ನೀರು ಕುಡಿಯಿರಿ.

 Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin