ಕಂಬಳ ನಿಷೇಧವನ್ನು ಹಿಂಪಡೆಯುವಂತೆ ಪ್ರಸ್ತಾವನೆ ಸಲ್ಲಿಸುವಲ್ಲಿ ಸರ್ಕಾರ ವಿಫಲ : ಎಚ್‍ಡಿಕೆ ಆರೋಪ

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy-JDS

ಬೆಂಗಳೂರು, ಜ.22-ರಾಜ್ಯ ಸರ್ಕಾರ ಕಂಬಳ ನಿಷೇಧವನ್ನು ಹಿಂಪಡೆಯುವಂತೆ ಪ್ರಸ್ತಾವನೆ ಸಲ್ಲಿಸುವಲ್ಲಿ ವಿಫಲವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಆರೋಪಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಜಲ್ಲಿಕಟ್ಟು ನಿಷೇಧದ ವಿರುದ್ಧ ದೊಡ್ಡಮಟ್ಟದ ಹೋರಾಟವೇ ನಡೆಯಿತು. ನಮ್ಮ ರಾಜ್ಯದಲ್ಲಿ ಒಗ್ಗಟ್ಟಿನ ವಾತಾವರಣ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.  ನಮ್ಮ ಜನರಲ್ಲಿ ಹೋರಾಟದ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲ. ತಮಿಳುನಾಡಿನಲ್ಲಿ ಆದಂತಹ ದೊಡ್ಡ ಮಟ್ಟದ ಪ್ರತಿಭಟನೆ ನಮ್ಮಲ್ಲೂ ಆಗಬೇಕು. ಆಗ ಕಂಬಳ ನಿಷೇಧದ ತೆರವಿನ ಹಾದಿ ಸುಗಮವಾಗಲಿದೆ ಎಂದರು.

ಜಾನಪದ ಕ್ರೀಡೆ ಕಂಬಳಕ್ಕೂ ಅನುಮತಿ ಸಿಗಬೇಕಿತ್ತು. ತಮಿಳುನಾಡಿನ ಜಲ್ಲಿಕಟ್ಟು ಕ್ರೀಡೆಗೆ ಸುಗ್ರೀವಾಜ್ಞೆ ತರುವ ಮೂಲಕ ನ್ಯಾಯಾಲಯ ಆದೇಶವನ್ನೇ ಬದಲಿಸಲಾಯಿತು. ಆದರೆ ಕೇಂದ್ರದಲ್ಲಿ ರಾಜ್ಯ ಪ್ರತಿನಿಧಿಸುವ ಮೂವರು ಸಚಿವರು, ಸಂಸದರು ಇದ್ದರೂ ಕೂಡ ಕಂಬಳಕ್ಕೆ ಅನುಮತಿ ದೊರೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.  ಅನುದಾನ ಹಂಚಿಕೆ, ಮಹದಾಯಿ ನದಿ ವಿವಾದ ಸೇರಿದಂತೆ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಲೇ ಇದೆ. ಕೇಂದ್ರ ಸರ್ಕಾರದಿಂದ ಎಲ್ಲಾ ವಿಚಾರದಲ್ಲೂ ನಮಗೆ ಅನ್ಯಾಯವಾಗುತ್ತಿದೆ. ಇದಕ್ಕೆ ಪರಿಹಾರವೆಂದರೆ ತಮಿಳುನಾಡು ಮಾದರಿಯಲ್ಲಿ ಪ್ರಾದೇಶಿಕ ಪಕ್ಷ ಬಲಗೊಳ್ಳಬೇಕೇ ಹೊರತು ರಾಷ್ಟ್ರೀಯ ಪಕ್ಷಗಳಲ್ಲ. ನಾಡಿನ ಜನರು ರಾಷ್ಟ್ರೀಯ ಪಕ್ಷಗಳನ್ನು ತಿರಸ್ಕರಿಸುವವರೆಗೂ ಕೇಂದ್ರದ ಬೆಂಬಲ ಹೆಚ್ಚು ದೊರೆಯುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin