ಕಟ್ಟಡವೊಂದರ 5ನೇ ಮಹಡಿಯಿಂದ ಜಿಗಿದು ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Jump Suicide

ಬೆಂಗಳೂರು,ಅ.24-ಬ್ಯಾಂಕ್ ಉದ್ಯೋಗಿಯೊಬ್ಬರು ಕಟ್ಟಡವೊಂದರ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಪ್ಪಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೂಲತಃ ಆಂಧ್ರಪ್ರದೇಶದ ವಸಂತ್ ವಿಹಾರ್(29) ಆತ್ಮಹತ್ಯೆ ಮಾಡಿಕೊಂಡ ಬ್ಯಾಂಕ್ ಉದ್ಯೋಗಿ.  ಕಳೆದ ಒಂದು ತಿಂಗಳ ಹಿಂದಷ್ಟೇ ಕೆ.ಜಿ.ರಸ್ತೆಯ ಸಂತೋಷ್ ಚಿತ್ರಮಂದಿರ ಬಳಿಯ ಗ್ಯಾಲಕ್ಸಿ ಕಟ್ಟಡದಲ್ಲಿರುವ ಸೆಂಟ್ರಲ್ ಬ್ಯಾಂಕ್‍ಗೆ ವಸಂತ್ ವಿಹಾರ್ ವರ್ಗಾವಣೆಯಾಗಿ ಹೆಬ್ಬಾಳದಲ್ಲಿ ವಾಸವಾಗಿದ್ದರು.

ಇಂದು ಬೆಳಗ್ಗೆ 7 ಗಂಟೆಗೆ ಮನೆಯಿಂದ ಬ್ಯಾಂಕ್‍ಗೆ ಬಂದ ವಸಂತ್ ವಿಹಾರ್ 8 ಗಂಟೆಯಲ್ಲಿ ಟೆರೆಸ್‍ಗೆ ಹೋಗಿ 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಏನೋ ಶಬ್ದ ಕೇಳಿದಂತಾಗಿ ಇಲ್ಲಿನ ಸೆಕ್ಯೂರಿಟಿ ಗಾರ್ಡ್ ಬಂದು ನೋಡಿದಾಗ ವಸಂತ್ ವಿಹಾರ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.  ವಸಂತ್ ವಿಹಾರ್ ಉತ್ತಮ ಕೆಲಸಗಾರನಾಗಿದ್ದು , ಒಳ್ಳೆಯ ನಡವಳಿಕೆ ಹೊಂದಿದ್ದನೆಂದು ಹೇಳಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.  ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin