ಕಟ್ಟಡ ಅನುಮತಿ ಮುಗಿದರೂ ಕಟ್ಟಡ ಕಟ್ಟಬಹುದೇ?

ಈ ಸುದ್ದಿಯನ್ನು ಶೇರ್ ಮಾಡಿ

ಬಾದಾಮಿ,ಅ.1- ಪುರಸಭೈ ವ್ಯಾಪ್ತಿಯಲ್ಲಿ ವಾಣಿಜ್ಯ ಕಟ್ಟಡ ಪರವಾನಗಿಯು ಅಗಸ್ಟ್ 2016ರಲ್ಲಿ ಮುಕ್ತಾಯವಾದರೂ ಕಟ್ಟಡ ಕಟ್ಟುವುದು ನಿಂತಿಲ್ಲ, ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಕಟ್ಟಡ ನಿಲ್ಲಿಸಲು ಸೂಚನೆ ನೀಡಿ ನೋಟಿಸ್ ಕೊಟ್ಟಿದ್ದರೂ ಕ್ಯಾರೆ ಎನ್ನದ ಕಟ್ಟಡದ ಮಾಲಕರು ಕಾನೂನು ಬಾಹಿರವಾಗಿ, ಪುರಸಭೆಯಿಂದ ಅನುಮೋದನೆಗೊಂಡ ನೀಲ ನಕ್ಷೆಯ ಪ್ರಕಾರ ಕಟ್ಟಡ ಕಟ್ಟದೆ ತಮ್ಮ ಇಚ್ಚಾಶಕ್ತಿಗೆ ಅನುಗುಣವಾಗಿ ಕಟ್ಟಡಗಳನ್ನು ನಿರ್ಮಿಸುತ್ತಿರುವುದು ವಿಷಾದನೀಯ ಸಂಗತಿ. ಮಾಲಿಕರೊಂದಿಗೆ ಪುರಸಭಾ ಅಧಿಕಾಗಳು ಶಾಮೀಲಾಗಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಯಾವುದೇ ಒಂದು ವಾಣಿಜ್ಯ ಕಟ್ಟಡ ಕಟ್ಟಬೇಕಾದರೆ ಗ್ರಾಹಕರ ಸುರಕ್ಷತೆಯ ಹಿತದೃಷ್ಠಿಯಿಂದ ಸಾಕಷ್ಟು ಸೆಟ್ ಬ್ಯಾIಕ್‍ಗಳನ್ನು ಬಿಡಬೇಕಿರುವುದು ಕಾನೂನು. ಆದರೆ ಕಟ್ಟಡದ ಮಾಲೀಕರು ಕಾನೂನನ್ನು ಗಾಳಿಗೆ ತೂರಿ ಅಧಿಕಾರಿಗಳಿಗೆ ಒತ್ತಡ ಹೇರಿ ಕಟ್ಟಡ ನಿರ್ಮಿಸುತ್ತಿದ್ದಾರೆ, ಇದರಿಂದ ಸರಕಾರದ ಬೊಕ್ಕಸಕ್ಕೆ ಆರ್ಥಿಕ ನಷ್ಟದೊಂದಿಗೆ ಗ್ರಾಹಕರ ಪ್ರಾಣಕ್ಕೂ ಕುತ್ತು ಬರುವ ಸಂಭವವಿದೆ ಎಂಬ ಅಂಶವನ್ನ ಅಲ್ಲಗಳಿಯುವಂತಿಲ್ಲ, ಮಾಲಿಕರು ಕಟ್ಟಡ ಕಟ್ಟುವಾಗ ಬಹು ಮಹಡಿಗಳಿಗೆ ಅನುಗುಣವಾಗಿ ವಾಹನಗಳ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶ ಬಿಡಬೇಕೆಂಬುದು

ಕಾನೂನು. ಆ ಕಾನೂನಿಗೂ ಎಳ್ಳು ನೀರು ಬಿಟ್ಟು ಕಟ್ಟಡ ನಿರ್ಮಿಸುತ್ತಿದ್ದಾರೆ, ಐತಿಹಾಸಿಕ ಸ್ಥಳವಾಗಿದ್ದರಿಂದ ದೇಶ ವಿದೇಶದಿಂದ ರಾಜ್ಯ ಹೊರ ರಾಜ್ಯಗಳಿಂದ ಪ್ರವಾಸಿ ಗರು ಆಗಮಿಸುವುದರಿಂದ ಅವರ ವಾಹನಗಳನ್ನು ನಿಲ್ಲಿಸಲು ಪರದಾಡು ವಂತಾಗಿದೆ.ಪುರಸಭೆಯ ಕಾನೂನು ಬಡವರಿಗೆ ಅಷ್ಟೆ ಕಡ್ಡಾಯ ಈ ಕಾನೂನು ಶ್ರೀಮಂತರಿಗೆ ಅನ್ವಯಿಸುವುದಿಲ್ಲ ಎಂಬುದು ಇದರಿಂದ ತಿಳಿದುಬರುತ್ತದೆ, ಈ ರೀತಿಯ ಕಾನೂನು ಬಡವರಿಗೊಂದು ಶ್ರೀಮಂತರಿಗೊಂದು ಎಂಬ ತಾರತಮ್ಯ ವನ್ನು ಪುರಸಭೆಯ ಅಧಿಕಾರಿಗಳು ಸರಿಪಡಿಸಬೇಕು ಎಂಬುದು ಜನರರ ಆಶಯ. ಇನ್ನಾದರೂ ಪುರಸಭೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ

 

► Follow us on –  Facebook / Twitter  / Google+

Facebook Comments

Sri Raghav

Admin