ಕಟ್ಟಡ ಕುಸಿತ ಕಾರ್ಮಿಕರು ಪಾರು

ಈ ಸುದ್ದಿಯನ್ನು ಶೇರ್ ಮಾಡಿ

Eesanje.....

ಗದಗ,ಅ.18-ಹಳೆ ಕಟ್ಟಡ ದುರಸ್ತಿ ವೇಳೆ ಕುಸಿದು ಹಲವು ಕಾರ್ಮಿಕರು ಪವಾಡ ಸದೃಶ್ಯ ರೀತಿಯಲ್ಲಿ ಪಾರಾಗಿರುವ ಘಟನೆ ಸರಫಾ ಬಜಾರ್‍ನಲ್ಲಿ ನಡೆದಿದೆ.ಓಸವಾಲ್ ಎಂಬುವವರಿಗೆ ಸೇರಿದ ಎರಡು ಅಂತಸ್ತಿನ ಹಳೆ ಕಟ್ಟಡದ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ನೆಲಮಾಳಿಗೆಯಲ್ಲಿ ಗೋಡೆ ಒಡೆಯುವಾಗ ಏಕಾಏಕಿ ಮೇಲ್ಭಾಗ ಕುಸಿಯಲು ಪ್ರಾರಂಭವಾಯಿತು. ಕೂಡಲೇ ಅಪಾಯದ ಸೂಚನೆಯಿಂದ ಎಚ್ಚೆತ್ತುಕೊಂಡ ಕಾರ್ಮಿಕರೆಲ್ಲರೂ ಹೊರಗೆ ಓಡಿಬಂದು ಜೀವ ಉಳಿಸಿಕೊಂಡಿದ್ದಾರೆ.ಆದರೆ ಒಂದು ಕಾರು, ಒಂದು ಬೈಕ್ ಸೇರಿದಂತೆ ಮನೆಯಲ್ಲಿನ ಕೆಲವು ವಸ್ತುಗಳು ಜಖಂಗೊಂಡಿದ್ದು ಸ್ಥಳಕ್ಕೆ ಗದಗ ಶಹರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

► Follow us on –  Facebook / Twitter  / Google+

 

Facebook Comments

Sri Raghav

Admin