ಕಡಬಗೆರೆ ಶ್ರೀನಿವಾಸ್ ಶೂಟೌಟ್ ಪ್ರಕರಣ : ನಾಲ್ವರ ಅರೆಸ್ಟ್, 4 ಪಿಸ್ತೂಲ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Kadabagere-Srinivas-01

ಬೆಂಗಳೂರು, ಫೆ.21- ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಮೇಲಿನ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನು ನಾಲ್ವರನ್ನು ಬಂಧಿಸಿ 4 ಪಿಸ್ತೂಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.  ಮೀಟರ್ ಮೋಹನ, ನಾಗ, ಬಸವ ಮತ್ತು ಶಿವ ಬಂಧಿತ ಆರೋಪಿಗಳು.  ಪ್ರಕರಣದ ತನಿಖೆ ನೇತೃತ್ವ ವಹಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಅವರ ನೇತೃತ್ವದ ತಂಡ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.  ಯಲಹಂಕ ಠಾಣೆ ವ್ಯಾಪ್ತಿಯ ನ್ಯಾಯಾಂಗ ಬಡಾವಣೆಯ ಪ್ಯಾರಲಲ್ ರಸ್ತೆಯಲ್ಲಿ ದರೋಡೆಗೆ ಹೊಂಚು ಹಾಕಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಬಂಧಿತರಿಂದ 2 ಕಾರು, ಪಿಸ್ತೂಲ್, ಜೀವಂತ ಗುಂಡು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, 4 ಪಿಸ್ತೂಲ್‍ಗಳಲ್ಲಿ ಶೂಟೌಟ್‍ಗೆ ಬಳಸಿದ್ದ ಪಿಸ್ತೂಲ್ ಸಹ ಇದ್ದು, ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.  ಬಂಧಿತರಾದ ಮೋಹನ್ ಮತ್ತು ನಾಗ ರೌಡಿಶೀಟರ್‍ಗಳಾದ ಸೈಲೆಂಟ್ ಸುನಿಲ ಹಾಗೂ ಒಂಟೆ ರೋಹಿತ್‍ನ ಸಹಚರರಾಗಿದ್ದು, ಇವರ ಪರವಾಗಿ ಸುಪಾರಿ ಕೊಲೆ, ಇತರೆ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ವಿಚಾರಣೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin