ಕಡಿಮೆ ಅಂಕ : ಪಿಯು ವಿದ್ಯಾರ್ಥಿನಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

pu-student-sucide
ಮದ್ದೂರು, ಮೇ 12- ಕಡಿಮೆ ಅಂಕ ಗಳಿಸಿದ ಕಾರಣ ಮನನೊಂದ ಪಿಯು ವಿದ್ಯಾರ್ಥಿನಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟ ಣದ ಜಯಲಕ್ಷ್ಮಿ ನಂಜಪ್ಪ ಕಲ್ಯಾಣ ಮಂಟಪದ ಸಮೀಪ ರೈಲು ಹಳಿಯಲ್ಲಿ ನಡೆದಿದೆ.  ಚನ್ನಪಟ್ಟಣ ತಾಲೂಕಿನ ಕನ್ನಸಂದ್ರ ಗ್ರಾಮದ ಕೆ.ಎಸ್.ಸುರೇಂದ್ರ ಎಂಬುವರ ಮಗಳು ಎಸ್.ನಿಖಿತಾ ಆತ್ಮಹತ್ಯೆ ಮಾಡಿಕೊಂಡ ಪಿಯು ವಿದ್ಯಾರ್ಥಿನಿ.  ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಮೆಡಿಕಲ್ ಸೀಟು ಪಡೆಯಬೇಕೆಂಬ ಕನಸು ಕಂಡಿದ್ದ ನಿಖಿತಾ, ಪಿಯು ಫಲಿತಾಂಶದಲ್ಲಿ ಶೇ.70ರಷ್ಟು ಅಂಕ ಪಡೆದಿದ್ದಳು.  ಇದರಿಂದ ಮನನೊಂದ ಈಕೆ ನಿನ್ನೆ ಸಂಜೆ ಚನ್ನಪಟ್ಟಣದಿಂದ ಮದ್ದೂರಿಗೆ ಬಂದು ನಂತರ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin