ಕಡಿಮೆ ಬಡ್ಡಿದರ ಜಾಗತಿಕ ಮಾರುಕಟ್ಟೆಯನ್ನು ವಿರೂಪಗೊಳಿಸುತ್ತವೆ : ರಘುರಾಂ ರಾಜನ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Raghuram-Rajan

ನ್ಯೂಯಾರ್ಕ್, ಸೆ.6- ಕಡಿಮೆ ಬಡ್ಡಿದರಗಳು ಜಾಗತಿಕ ಮಾರುಕಟ್ಟೆಗಳನ್ನು ವಿರೂಪಗೊಳಿಸುತ್ತವೆ ಎಂದು ರಿಸರ್ವ್ ಬ್ಯಾಂಕ್ ಆಪ್ ಇಂಡಿಯಾದ (ಆರ್ಬಿಐ) ಮಾಜಿ ಗೌರ್ನರ್ ರಘುರಾಂ ರಾಜನ್ ಎಚ್ಚರಿಕೆ ನೀಡಿದ್ದಾರೆ. ಜಾಗತಿಕ ಬೆಳವಣಿಗೆ ಚಾಲನೆಗೆ ಮತ್ತೆ ಚಲನೆ ನೀಡುವುದು ಹೇಗೆ ಎಂದು ವಿಶ್ವದ ಪ್ರಮುಖ ಬ್ಯಾಂಕುಗಳು ಕಾರ್ಯತಂತ್ರಗಳನ್ನು ರೂಪಿಸುತ್ತಿರುವಾಗಲೇ ರಾಜನ್ ಈ ಹೊಸ ಎಚ್ಚರಿಕೆ ಕೊಟ್ಟಿದ್ದಾರೆ. ಜಾಗತಿಕವಾಗಿ ಕಡಿಮೆ ಬಡ್ಡಿದರಗಳು ಅಂತಾರಾಷ್ಟ್ರೀಯ ಮಾರುಕಟ್ಟೆಗಳನ್ನು ವಿರೂಪಗೊಳಿಸುತ್ತವೆ ಹಾಗೂ ಅವುಗಳನ್ನು ಪರಿತ್ಯಕ್ತಗೊಳಿಸಲು ಕಷ್ಟವಾಗುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್ಗೆ ನೀಡಿರುವ ಸಂದರ್ಶನದಲ್ಲಿ ರಾಜನ್ ವಿಶ್ಲೇಷಿಸಿದ್ದಾರೆ.

ಬಡ್ಡಿದರ ಇಳಿಕೆಯು ಇದಕ್ಕೆ ಪರ್ಯಾಯವಲ್ಲ, ಬೆಳವಣಿಗೆಗೆ ಉತ್ತೇಜನ ನೀಡಲು ವಿವಿಧ ರೀತಿಯ ಸುಧಾರಣೆಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದ್ದಾರೆ.
ಬೆಳವಣಿಗೆಗೆ ಉತ್ತೇಜನ ನೀಡಲು ಅಮೆರಿಕ ಮತ್ತು ಯುರೋಪ್ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳು ಕಡಿಮೆ ಬಡ್ಡಿದರ ನೀತಿ ಅನುಸರಿಸುತ್ತಿರುವ ಸಂದರ್ಭದಲ್ಲಿ ಈ ಸಲಹೆ ಮಹತ್ವ ಪಡೆದುಕೊಂಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin