ಕಡಿಮೆ ಬೆಲೆಯಲ್ಲಿ ಪತಂಜಲಿಗೆ 600 ಎಕರೆ ಭೂಮಿ ಮಂಜೂರು : ವಿವಾದದ ಸುಳಿಯಲ್ಲಿ ಬಾಬಾ ರಾಮದೇವ್

ಈ ಸುದ್ದಿಯನ್ನು ಶೇರ್ ಮಾಡಿ

Baba-Ramadev

ಮುಂಬೈ, ಮೇ 6- ಅರಂಭವಾದ ಅಲ್ಪಾವಧಿಯಲ್ಲೇ ಲೋಕಪ್ರಿಯವಾಗಿರುವ ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆಗೆ ವಿವಾದಗಳೂ ಸುತ್ತಿಕೊಳ್ಳುತ್ತಿವೆ. ಮಹಾರಾಷ್ಟ್ರ ಸರ್ಕಾರ ನಾಗಪುರದಲ್ಲಿ ಈ ಸಂಸ್ಥೆಗೆ ಅತ್ಯಂತ ಕಡಿಮೆ ಬೆಲೆಗೆ 600 ಎಕರೆ ಜಮೀನನ್ನು ನೀಡಲಾಗಿದೆ ಎಂಬ ಆರೋಪ ಹೊಸ ವಿವಾದ ಹುಟ್ಟು ಹಾಕಿದ್ದು, ಬಾಂಬೆ ಹೈಕೋರ್ಟ್ ಈ ಬಗ್ಗೆ ವಿವರ ಕೇಳಿದೆ. ನಾಗಪುರ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಬಳಿ ಫುಡ್‍ಪಾರ್ಕ್ ಸ್ಥಾಪನೆಗಾಗಿ ಪತಂಜಲಿ ಕಂಪನಿಗೆ ನೀಡಿರುವುದರಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಂಬೈ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು ಮತ್ತು ನ್ಯಾಯಮೂರ್ತಿ ಜೆ.ಎಸ್.ಚೆಲ್ಲೂರು ಅವರನ್ನು ಒಳಗೊಂಡ ನ್ಯಾಯಪೀಠ ಈ ಬಗ್ಗೆ ಮಾಹಿತಿ ಕೋರಿದೆ.ಯಾವ ಆಧಾರದ ಮೇಲೆ ಕಂಪನಿಗೆ ರಿಯಾಯಿತಿಗಳನ್ನು ನೀಡಲಾಗಿದೆ. ಅತ್ಯಂತ ಬೆಲೆಬಾಳುವ ಜಮೀನನ್ನು ಅತಿ ನಿಕೃಷ್ಟ ಬೆಲೆಗೆ ನೀಡಲಾಗಿದೆಯೇ, ಅಲ್ಲದೇ ರೈತರ ಜಮೀನನ್ನು ಕಬಳಿಸಿ, ಕಂಪನಿಗೆ ನೀಡಲಾಗಿದೆಯೇ ಎಂಬುದನ್ನು ತಿಳಿದುಕೊಳ್ಳಲು ಬಯಸುವುದಾಗಿ ನ್ಯಾಯಪೀಠ ಹೇಳಿದೆ.   ಮಹಾರಾಷ್ಟ್ರ ಸರ್ಕಾರ ಎಲ್ಲ ಟೆಂಡರ್ ನಿಯಮಗಳನ್ನು ಉಲ್ಲಂಘಿಸಿ ಪತಂಜಲಿ ಸಂಸ್ಥೆಗೆ ಜಮೀನು ನೀಡಿದೆ ಎಂದು ನಿರುಪಮ್ ಅರ್ಜಿಯಲ್ಲಿ ಆರೋಪಿಸಿದ್ದರು. ಮೀಸಲು ಅರಣ್ಯ ಪ್ರದೇಶದ ಒಂದು ಭಾಗವನ್ನೂ ಸಹ ನೀಡಲಾಗಿದೆ. ಅತ್ಯಂತ ರಿಯಾಯಿತಿ ದರದಲ್ಲಿ ಬಾಬಾ ರಾಮದೇವ್ ಅವರಿಗೆ ಜಮೀನು ನೀಡಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಅಪಾರ ನಷ್ಟವಾಗಿದೆ ಎಂದು ಅವರು ಆಪಾದಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin