ಕಡೂರಿನಲ್ಲಿ ವಿಜೃಂಭಣೆಯ ಗಣೇಶೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

ganesha--kaduduru

ಕಡೂರು, ಸೆ.7- ಪಟ್ಟಣದಲ್ಲಿ ಕಳೆದ 27 ವರ್ಷಗಳಿಂದ ಸತತವಾಗಿ ಆಚರಿಸಿಕೊಂಡು ಬಂದಿರುವ ಪ್ರಸನ್ನ ಗಣಪತಿ ವಾರ್ಷಿಕೋತ್ಸವ ಈ ಬಾರಿ ವಿಜೃಂಭಣೆಯಿಂದ ನೆರವೇರಿತು.ಕೆ.ಎಂ. ಸತ್ಯನಾರಾಯಣ ಅವರ ಅಧ್ಯಕ್ಷತೆಯಲ್ಲಿ ಸುಮಾರು 11 ಅಡಿ ಎತ್ತರದ ಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಧರ್ಮೇಗೌಡ ಇವರು ಒಂದು ತಿಂಗಳ ಕಾಲ ನಡೆಯುವ ಕಾರ್ಯಕ್ರಮದ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿ ಈಗಾಗಲೇ ಸೆಪ್ಟೆಂಬರ್ ತಿಂಗಳಾದ್ರು ಮಳೆ ಬಾರದೆ ಭೀಕರ ಬರಗಾಲ ಬಂದಿದ್ದು, ಗಣಪತಿ ಪ್ರತಿಷ್ಠಾಪನೆಯ ನಂತರವಾದರೂ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿ ಜನರಿಗೆ ನೆಮ್ಮದಿ ತರಬೇಕಿದೆ ಎಂದು ತಿಳಿಸಿದರು.

ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ವಿಜೇತರನ್ನು ಕೂಡ ಸನ್ಮಾನಿಸಲಾಯಿತು. ಜಿ.ಪಂ. ಅಧ್ಯಕ್ಷ ಬೆಳ್ಳಿ ಪ್ರಕಾಶ್, ಜಿ.ಪಂ. ಮಾಜಿ ಅಧ್ಯಕ್ಷ ಕೆ.ಎಂ.ಕೆಂಪರಾಜು ಸೇರಿದಂತೆ ಹಲವಾರು ಮಂದಿ ಇದರಲ್ಲಿ ಪಾಲ್ಗೊಂಡಿದ್ದರು.35 ಲಕ್ಷ ರೂಗಳ ವೆಚ್ಚದ ಶಾಶ್ವತ ಪೆಂಡಾಲ್ ನಿರ್ಮಾಣ ಮಾಡಲಾಗಿದ್ದು, ಇದರ ಮೇಲ್ಭಾಗದಲ್ಲಿ 31 ಅಡಿ ಎತ್ತರದ ಶಿವ-ಪಾರ್ವತಿ ಹಾಗೂ ಸುಬ್ರಹ್ಮಣ್ಯ ವಿಗ್ರಹವನ್ನು ನಿರ್ಮಾಣಗೊಳಿಸುವ ಯೋಜನೆಯನ್ನು ಹೊಂದಲಾಗಿದೆ. ಈ ಬಾರಿ 30 ದಿನಗಳ ಕಾಲ ಪ್ರಸನ್ನ ಗಣಪತಿಯನ್ನು ಪ್ರತಿಷ್ಠಾಪಿಸಿ ಪ್ರತಿ ದಿನ ವಿಶೇಷ ಪೂಜೆ ಕಾರ್ಯಗಳೊಂದಿಗೆ ಸಂಜೆ ಮನೋರಂಜನೆ ಕಾರ್ಯಕ್ರಮಗಳು ನಡೆಯಲಿದೆ ಎಂದರು.

 

Follow us on –  Facebook / Twitter  / Google+

Facebook Comments

Sri Raghav

Admin