ಕಡೂರಿನ ರಸ್ತೆಗಳ ಅಭಿವೃದ್ಧಿಗೆ 24 ಕೋಟಿ ರೂ. ಮಂಜೂರು : ಸಧ್ಯದಲ್ಲೇ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

datta

ಕಡೂರು, ಫೆ.18- ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಯಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ 24 ಕೋಟಿ ರೂ.ಗಳ ಅನುದಾನ ಮಂಜೂರಾಗಿ ಕಾಮಗಾರಿ ಸಧ್ಯದಲ್ಲೇ ಚಾಲನೆಯಾಗಲಿದೆ ಎಂದು ವೈ.ಎಸ್.ವಿ. ದತ್ತ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾಸಭಾ ಕ್ಷೇತ್ರದ ಗ್ರಾಮೀಣ ರಸ್ತೆಗಳ ಸುಧಾರಣೆಗಾಗಿ ಬಂದಿರುವ ಅನುದಾನದಲ್ಲಿ ಈಗಾಗಲೇ ಹಲವಾರು ರಸ್ತೆಗಳ ಕಾಮಗಾರಿ ಮುಗಿದಿದೆ. 4 ಹೋಬಳಿಗಳ ಬೀರೂರು, ಯಗಟಿ, ಸಿಂಗಟಗೆರೆ, ಶ್ಯಾನೆಗೆರೆ, ಬಾಣಾವರ ರಸ್ತೆ ಕಾಮಗಾರಿಗೂ ಅನುದಾನ ಬಂದಿದ್ದು, ಕಳೆದ 40 ವರ್ಷಗಳಿಂದ ಶಾಪಗ್ರಸ್ಥವಾಗಿದ್ದ ಈ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಳಕೆ ಮಾಡಲಿದ್ದು ಲೋಕೋಪಯೋಗಿ ಅಪೆಂಡಿಕ್ಸ್-ಇ ಯೋಜನೆಯಲ್ಲಿ 9.80 ಕೋಟಿ ರೂ. ಮಂಜೂರಾಗಿ ಒಟ್ಟಾರೆ 16 ಕಿ.ಮೀ. ರಸ್ತೆ ಕಾಮಗಾರಿಯಾಗಲಿದೆ ನಡೆಯಲಿದೆ ಎಂದು ವಿವರಿಸಿದರು.

ಜಿಲ್ಲೆಯ ಇತರೆ ಕ್ಷೇತ್ರಗಳಿಗಿಂತ ಹೆಚ್ಚು ಹಣವನ್ನು ಕಡೂರು ಕ್ಷೇತ್ರಕ್ಕೆ ನೀಡಲಾಗಿದೆ. ಅಪೆಂಡಿಕ್-ಇ ಯೋಜನೆಯಡಿಯಲ್ಲಿ ಜಿಲ್ಲೆಗೆ 64.20 ಕೋಟಿ ರೂ.ಗಳ ಹಣ ಬಂದಿದೆ. ಇದೇ ಅನುದಾನದಲ್ಲಿ ಸಿಂಗಟಗೆರೆ, ಪಂಚನಹಳ್ಳಿ ರಸ್ತೆ ಕಾಮಗಾರಿಗೆ 3.50 ಕೋಟಿ ರೂ. ಕೆ.ಎಸ್. ರಸ್ತೆಯಿಂದ ಜಿಗಣೇಹಳ್ಳಿ ರಸ್ತೆಗೆ 1.00 ಕೋಟಿ ರೂ., ಕಡೂರಿನಿಂದ ಎಮ್ಮೆದೊಡ್ಡಿ ರಸ್ತೆಗೆ 1.60 ಕೋಟಿ ರೂ., ಪಂಚನಹಳ್ಳಿಯಿಂದ ತಿಮ್ಮಾಪುರ ರಸ್ತೆಗೆ 2.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಹೇಳಿದರು.ನಂಜುಂಡಪ್ಪ ವರದಿಯ ಪ್ರಕಾರ ಕಡೂರು ತಾಲ್ಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ಇದಕ್ಕಾಗಿ ರಸ್ತೆ ಅಭಿವೃದ್ಧಿಗೆ 5.00 ಕೋಟಿ ರೂ. ಮಂಜೂರಾಗಿದ್ದು, ಇದರಲ್ಲಿ ಬೀರೂರು-ಲಿಂಗದಹಳ್ಳಿ ರಸ್ತೆಗೆ 1.00 ಕೋಟಿ ರೂ., ಕುಪ್ಪಾಳಿನಿಂದ ಸಿದ್ಧರಾಪುರ ರಸ್ತೆಗೆ 1.00 ಕೋಟಿ ರೂ, ಸರಸ್ವತೀಪುರದಿಂದ ಚಿಕ್ಕಂಗಳ ರಸ್ತೆಗೆ 1.00 ಕೋಟಿ ರೂ. ಅನುದಾನ ಸೇರಿದಂತೆ ಇನ್ನಿತರ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿದೆ ಎಂದು ವಿವರಿಸಿದರು.

ತಚಾಲೂಕಿನಾದ್ಯಂತ ಅಗತ್ಯವಿರುವ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಈ ಎಲ್ಲಾ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿ ನಡೆಯಲಿದ್ದು, ಒಂದು ತಿಂಗಳಲ್ಲಿ ಪ್ರಾರಂಭವಾಗಲಿವೆ ಎಂದರು. ಕಳೆದ ಮೂರುವರೆ ವರ್ಷದಲ್ಲಿ ಸಂಪರ್ಕ ರಸ್ತೆಗಳ ಕ್ರಾಂತಿಯೇ ನಡೆದಿದೆ. ಕಳೆದ ಐವತ್ತು ವರ್ಷಗಳ ಇತಿಹಾಸದಲ್ಲಿ ಈ ಮಟ್ಟದ ಅನುದಾನ ಬಂದಿರಲಿಲ್ಲ. ಎದುರಾಳಿಗಳು ಟೀಕೆಗಾಗಿ ಟೀಕಿಸುವುದು ಸರಿಯಾದ ಕ್ರಮವಲ್ಲ. ಪ್ರಾಮಾಣಿಕವಾಗಿ ಚರ್ಚೆಗೆ ಬರಲಿ. ವಾಸ್ತವತೆಯಿಂದ ಟೀಕೆ ಮಾಡಲಿ ಎಂದರು.  ಮುಖಂಡರಾದ ಕೋಡಿಹಳ್ಳಿ ಮಹೇಶ್, ಭಂಡಾರಿ ಶ್ರೀನಿವಾಸ್, ಕೆ.ಎಸ್. ರಮೇಶ್, ಡಿ. ಪ್ರಶಾಂತ್, ಗರುಗದಹಳ್ಳಿ ಕೆಂಚಪ್ಪ, ಯಗಟಿ ತಮ್ಮಯ್ಯ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin