ಕಡ್ಡಾಯವಾಗಿ ನಾಗರಿಕ ಬಂದೂಕು ತರಬೇತಿ ಶಿಬಿರ  

ಈ ಸುದ್ದಿಯನ್ನು ಶೇರ್ ಮಾಡಿ

11

ಶಿರಸಿ,ಮಾ,15-ಬಂದೂಕು ತರಬೇತಿಯನ್ನು ಯಾಕಾಗಿ ಕೊಡುತಿದ್ದಾರೆ ಎಂಬುದನ್ನು ಅರಿತುಕೊಂಡು ಕಡ್ಡಾಯವಾಗಿ ಬಂದೂಕು ತರಬೇತಿಯನ್ನು ಪಡೆದುಕೊಂಡು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಶಿರಸಿ ಡಿವೈಎಸ್‍ಪಿ ನಾಗೇಶ ಶೆಟ್ಟಿ ಹೇಳಿದರು.ನಗರದಲ್ಲಿ ಕರ್ನಾಟಕ ಪೋಲಿಸ್ ಇಲಾಖೆ ಹಾಗೂ ರೋಟರಿ ಕ್ಲ್‍ಬ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಗರೀಕ ಬಂದೂಕು ತರಬೇತಿ ಕಾರ್ಯಕ್ರಮ ಉದ್ದೆಶಿಸಿ ಮಾತನಾಡಿದ ಅವರು ಕೆಲವೊಬ್ಬರಿಗೆ ಬಂದೂಕನ್ನು ಹೇಗೆ ಬಳಸಬೇಕು ಮತ್ತು ಅದಕ್ಕೆ ಸಂಬಂಧಿಸಿದ ಕಾನೂನು ಏನಿದೆ ಎಂಬುದೆ ಗೊತ್ತಿಲ್ಲ, ಆದ್ದರಿಂದ ಈ ತರಬೇತಿಯಲ್ಲಿ ಬಂದೂಕಿಗೆ ಸಂಬಂಧಪಟ್ಟಂತೆ ಕಾನೂನಾತ್ಮಕವಾಗಿ ಎಲ್ಲ ರೀತಿಯ ತರಬೇತಿ  ನೀಡಲಾಗುವುದು ಎಂದು ತಿಳಿಸಿದರು.

ತಾಲೂಕಿನ ನಗರ ಮತ್ತು ಹಳ್ಳಿಗಳಲ್ಲಿನ ಬಂದೂಕು ಹೊಂದಿರುವ ಸಾಮಾನ್ಯ ಜನರಿಗೆ ಕೆಲವೊಂದು ಸಂದರ್ಭಗಳಲ್ಲಿ ಬಂದೂಕನ್ನು ಸರಿಯಾದ ವೇಳೆಗೆ ಸಂಬಂದಪಟ್ಟ ಇಲಾಖೆಗೆ ಒಪ್ಪಿಸುವುದು ಮತ್ತು ವಾಪಸ್ ತರುವುದರ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿರುವುದು ತಿಳಿದು ಬಂದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಮುಖ್ಯಸ್ಥ ಡಾ. ದಿನೇಶ ಹೆಗಡೆ ಹೇಳಿದರು. ಈ ತರಬೇತಿಯು ನಿನ್ನೆಯಿಂದ ಇದೇ 20ರವರೆಗೆ ನಡೆಯಲಿದ್ದು ನುರಿತ ಮತ್ತು ಅನುಭವಿ ತರಬೇತುದಾರರಿಂದ ನಡೆಸಲಾಗುತ್ತದೆ. ಇಲ್ಲಿ ಶಿಸ್ತು ಹಾಗೂ ಕಠಿಣಶ್ರಮ ಮತ್ತು ಕಡ್ಡಾಯ ಹಾಜರಿ ಮುಖ್ಯವಾಗಿರುತ್ತದೆ. ಈ ಸಾರಿ 240 ಜನ ತರಬೇತಿಗೆ ಹಾಜರಾಗುತ್ತಿದ್ದಾರೆ. ಈ ತರಬೇತಿ ಶಿಬಿರವನ್ನು ತಹಶಿಲ್ದಾರ್ ಬಸಪ್ಪ ಪೂಜರ ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಶಿರಸಿ, ಯಲ್ಲಾಪುರ, ಮುಂಡಗೋಡ, ಸಿದ್ದಾಪುರದ ಪೋಲಿಸ ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin