ಕಣಿವೆಯಲ್ಲಿ ಶಾಂತಿ ಸ್ಥಾಪನೆಗೆ ನಿರ್ಣಯ

ಈ ಸುದ್ದಿಯನ್ನು ಶೇರ್ ಮಾಡಿ

Kashmir

ನವದೆಹಲಿ, ಆ.12-ಕಣಿವೆ ರಾಜ್ಯದಲ್ಲಿ ಭುಗಿಲೆದ್ದಿರುವ ಹಿಂಸಾಚಾರ, ಸಾವು-ನೋವು ಮತ್ತು ದೀರ್ಘಾವಧಿ ಕಫ್ರ್ಯೂ ಮುಂದುವರಿದಿರುವ ಬಗ್ಗೆ ಲೋಕಸಭೆಯಲ್ಲಿ ಇಂದು ತೀವ್ರ ಕಳವಳಪಡಿಸಿ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಸರ್ವಾನುಮತದ ನಿರ್ಣಯ ಅಂಗೀಕರಿಸಲಾಯಿತು. ಇಂದು ಕಲಾಪ ಆರಂಭವಾದ ಕೆಲ ಹೊತ್ತಿನಲ್ಲೇ ಕಾಶ್ಮೀರದಲ್ಲಿ ಅಶಾಂತಿ ನೆಲೆಸಿರುವ ವಿಷಯವನ್ನು ಸದಸ್ಯರು ಪ್ರಸ್ತಾಪಿಸಿದರು. ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಕಣಿವೆಯಲ್ಲಿ ಹಿಂಸಾಚಾರ ನಡೆಯುತ್ತಿದೆ. ಸಾವು-ನೋವುಗಳು ಸಂಭವಿಸಿದೆ. 34 ದಿನಗಳಿಂದ ಕಫ್ರ್ಯೂ ಜಾರಿಯಲ್ಲಿದೆ ಎಂದು ಸದಸ್ಯರು ಪಕ್ಷಭೇದ ಮರೆತು ಚರ್ಚೆಯಲ್ಲಿ ಪಾಲ್ಗೊಂಡರು.
ನಂತರ ಮಾತನಾಡಿದ ಗೃಹ ಸಚಿವ ರಾಜನಾಥಸಿಂಗ್, ಕಾಶ್ಮೀರದಲ್ಲಿ ಶಾಂತಿ-ಸೌಹಾರ್ದನ ನೆಲೆಗೊಳ್ಳುವ ಅಗತ್ಯವಿದೆ.

ಸಮಗ್ರತೆ ಮತ್ತು ಏಕತೆ ವಿಷಯದಲ್ಲಿ ರಾಜಿ ಇಲ್ಲ ಎಂದು ಹೇಳಿದರು. ಈ ಕುರಿತ ಚರ್ಚೆಯ ನಂತರ ಕಾಶ್ಮೀರಿ ಯುವಕರಲ್ಲಿ ವಿಶ್ವಾಸ ಮರುಸ್ಥಾಪನೆಗೆ ಸರ್ವಾನುಮತದ ಗೊತ್ತುವಳಿಯನ್ನು ಸದನದಲ್ಲಿ ಅಂಗೀಕರಿಸಲಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin