ಕಣಿವೆ ರಾಜ್ಯದಲ್ಲಿ ಯೋಧರ ಗುಂಡಿಗೆ 3 ಲಷ್ಕರ್ ಉಗ್ರರು ಖತಂ

ಈ ಸುದ್ದಿಯನ್ನು ಶೇರ್ ಮಾಡಿ

srina
ಶ್ರೀನಗರ, ನ.21-ಕಣಿವೆ ರಾಜ್ಯ ಕಾಶ್ಮೀರ ಯೋಧರು ಮತ್ತು ಉಗ್ರರ ಸಮರಭೂಮಿಯಾಗಿ ಮಾರ್ಪಟ್ಟಿದ್ದು, ಪ್ರತಿನಿತ್ಯ ಸಾವು-ನೋವಿನ ವರದಿಗಳಾಗುತ್ತಿವೆ. ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದ ಹಂದ್ವಾರ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಲಷ್ಕರ್-ಎ-ತೈಬಾ (ಎಲ್‍ಇಟಿ) ಭಯೋತ್ಪಾದನೆ ಸಂಘಟನೆಯ ಮೂವರು ಉಗ್ರರು ಹತರಾಗಿದ್ದಾರೆ.

ಪಾಕಿಸ್ತಾನದ ಎಲ್‍ಇಟಿ ಉಗ್ರರು ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ರೂಪಿಸಿದ್ದ ದೊಡ್ಡ ಸಂಚೊಂದು ಈ ಎನ್‍ಕೌಂಟರ್ ಮೂಲಕ ವಿಫಲವಾಗಿದೆ. ಹತ ಭಯೋತ್ಪಾದಕರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಳಿ ನಡೆಸಲು ಹುನ್ನಾರ ನಡೆಸುತ್ತಿರುವ ಉಗ್ರರ ಗುಂಪೊಂದು ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಹಂದ್ವಾರ ಪ್ರದೇಶದ ಮಗಂನಲ್ಲಿ ಅಡಗಿ ಕುಳಿತಿದ್ದಾರೆ ಎಂದು ಲಭಿಸಿದ ಖಚಿತ ವರ್ತಮಾನದ ಮೇರೆಗೆ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರಿದು ಶೋಧ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮರೆಯಲ್ಲಿ ಅಡಗಿದ್ದ ಉಗ್ರರು ಯೋಧರತ್ತ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ಭೀಕರ ಗುಂಡಿನ ಕಾಳಗ ನಡೆದು ಮೂವರು ಲಷ್ಕರ್ ಭಯೋತ್ಪಾದಕರು ಹತರಾದರು ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಎನ್‍ಕೌಂಟರ್ ವೇಳೆ ಪರಾರಿಯಾಗಿರುವ ಇತರ ಉಗ್ರರಿಗಾಗಿ ಆ ಪ್ರದೇಶದಲ್ಲಿ ಮಾನವ ಬೇಟೆ ಮುಂದುವರಿದಿದೆ.

Facebook Comments

Sri Raghav

Admin