ಕಣ್ಮನ ತಣಿಸಿದ ರಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭ

ಈ ಸುದ್ದಿಯನ್ನು ಶೇರ್ ಮಾಡಿ

sdgagh

ರಿಯೋ ಡಿ ಜನೈರೋ, ಆ.6– ವಿಶ್ವವಿಖ್ಯಾತ ಸಾಂಬಾ ನೃತ್ಯದೊಂದಿಗೆ ವಿವಿಧ ದೇಶಗಳ ಭವ್ಯ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಗಳನ್ನು ಸಾರುವ ನಯನ ಮನೋಹರ ಕಾರ್ಯಕ್ರಮಗಳೊಂದಿಗೆ ಮೋಹಕನಗರಿ ರಿಯೋದ ಮರಾಕಾನ ಕ್ರೀಡಾಂಗಣದಲ್ಲಿ 31ನೇ ಒಲಿಂಪಿಕ್ ಕ್ರೀಡಾಕೂಟಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.  ಕ್ರೀಡಾ ಜಗತ್ತಿನ ಮಹೋನ್ನತ ಹಬ್ಬದ ಉದ್ಘಾಟನಾ ಸಮಾರಂಭವು ಜಾಗತಿಕ ತಾಪಮಾನದ ಎಚ್ಚರಿಕೆಯ ಪ್ರಬಲ ಸಂದೇಶದೊಂದಿಗೆ ಸರಳವಾಗಿ ಅದರೆ ಕಣ್ಮನ ತಣಿಸುವ ರೀತಿಯಲ್ಲಿ ಜರುಗಿತು.   ನಾಲ್ಕು ಗಂಟೆಗಳ ಕಾಲ ನಡೆದ ಈ ಅತ್ಯಾಕರ್ಷಕ ಸಮಾರಂಭವನ್ನು ಲಕ್ಷಾಂತರ ಮಂದಿ ವೀಕ್ಷಿಸಿ ರೋಮಾಂಚನಗೊಂಡರು. ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ವೀಕ್ಷಕರು ಪುಟ್ಟ ತೆರೆಯಲ್ಲಿ ಈ ಸಾಂಸ್ಕ್ರತಿಕ ವೈಭವನ್ನು ನೋಡಿ ಪುಳಕಿತರಾದರು.

CpJTBi1VYAAwaMs

ಬ್ರೆಜಿಲ್ ಉಸ್ತುವಾರಿ ಅಧ್ಯಕ್ಷ ಮೈಕೇಲ್ ಟೆಮೆರ್ ಶುಕ್ರವಾರ ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನ ಶನಿವಾರ ಮುಂಜಾನೆ 4.30) ಒಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನೆಯನ್ನು ವಿದ್ಯುಕ್ತವಾಗಿ ಘೋಷಿಸಿದರು.   ದಕ್ಷಿಣ ಅಮೆರಿಕದಲ್ಲಿ ಇದೇ ಪ್ರಥಮ ಬಾರಿಗೆ ನಡೆಯುತ್ತಿರುವ ಕ್ರೀಡಾ ಮಹಾಹಬ್ಬದಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ಥಾಮಸ್ ಬ್ಯಾಚ್ ಮತ್ತು ವಿಶ್ವಸಂಸ್ಥೆ ಮುಖ್ಯಸ್ಥ ಬಾನ್-ಕೀ ಮೂನ್ ಈ ಭವ್ಯ ಸಮಾರಂಭವನ್ನು ಸಾಕ್ಷೀಕರಿಸಿದರು.

ಕ್ರೀಡಾಕೂಟದ ಅಧಿಕೃತ ಘೋಷಣೆ ನಂತರ, 2004ರ ಅಥೆನ್ಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಬ್ರೆಜಿಲ್‍ನ ಮ್ಯಾರಾಥಾನ್ ಓಟಗಾರ ವ್ಯಾನ್‍ಡೆರ್‍ಲೀ ಡಿ ಲಿಮಾ ಒಲಿಂಪಿಕ್ ಜ್ಯೋತಿಯನ್ನು ಬೆಳಗಿಸಿದರು ಹಾಗೂ ಮೂರು ಬಾರಿ ಫ್ರೆಂಚ್ ಓಪನ್ ಟೆನ್ನಿಸ್ ವಿಜೇತ ಗುಸ್ತಾವ್ ಕ್ಯೂಯಿರ್‍ಟೆನ್ ಕ್ರೀಡಾ ಜ್ಯೋತಿ ಪ್ರಜ್ವಲಿಸಲು ನೆರವಾದರು. ಸಹಸ್ರಾರು ಜನರ ಪ್ರಚಂಡ ಕರತಾಡನವು ಕ್ರೀಡಾಂಗಣದಲ್ಲಿ ಮಾರ್ದನಿಸಿತು.

ವಿವಿಧ ದೇಶಗಳ ಇತಿಹಾಸ, ಸಂಸ್ಕøತಿ ಮತ್ತು ಪರಂಪರೆಗಳ ಸಂಕೇತವಾಗಿ ಅನೇಕ ನೃತ್ಯಗಳು ಮತ್ತು ಸ್ತಬ್ಧಚಿತ್ರಗಳ ಸಾಲಂಕೃತ ಮೆರವಣಿಗೆಗಳು ಪಥಸಂಚಲನದ ಪ್ರಮುಖ ಆಕರ್ಷಣೆಗಳಾಗಿದ್ದವು.  ಉದ್ಘಾಟನಾ ಸಮಾರಂಭದ ಪಥಸಂಚನದಲ್ಲಿ ಗ್ರೀಸ್ ಮೊದಲ ಸ್ಥಾನವನ್ನು ಪ್ರತಿನಿಧಿಸಿತ್ತು. ಭಾರತ ಮೆರವಣಿಗೆ 95ನೇ ರಾಷ್ಟ್ರವಾಗಿತ್ತು. ತ್ರಿವರ್ಣ ಧ್ವಜದಾರಿ ಅಭಿನವ ಬಿಂದ್ರಾ ಪಥಸಂಚಲನದಲ್ಲಿ ಭಾರತವನ್ನು ಮುನ್ನಡೆಸಿದರು.  ಭಾರತದ 70 ಕ್ರೀಡಾಪಟುಗಳು (ಒಟ್ಟು 118 ಮಂದಿಯಲ್ಲಿ) ಮತ್ತು 24 ಅಧಿಕಾರಿ ಸಿಬ್ಬಂದಿ ಈ ಪರೇಡ್‍ನಲ್ಲಿ ಭಾಗವಹಿಸಿದ್ದರು. ಪುರುಷ ಅಥ್ಲೀಟ್‍ಗಳು ಕಡು ನೀಲಿ ಬಣ್ಣದ ಕೋಟು ಮತ್ತು ಪ್ಯಾಂಟ್ ಧರಿಸಿದ್ದರೆ, ಮಹಿಳಾ ಪಟುಗಳು ನೀಲಿ ಕೋಟು ಮತ್ತು ಸಾಂಪ್ರದಾಯಿಕ ಸೀರೆಯಲ್ಲಿ ಕಂಗೊಳಿಸಿದರು. ಲಿಯಾಂಡರ್ ಪೇಸ್, ಜ್ವಾಲಾ ಗುಟ್ಟಾ, ಅಶ್ವಿನಿ ಪೊನ್ನಪ್ಪ ಮತ್ತು ದೀಪಾ ಕರ್ಮಕರ್ ಪರೇಡ್‍ನಲ್ಲಿ ಗಮನಸೆಳೆದರು.

CpJTBmYUIAA1QJW

ಈ ಕ್ರೀಡಾ ಮಹಾಹಬ್ಬ ಆ.5 ರಿಂದ 21ರವರೆಗೆ ನಡೆಯಲಿದ್ದು, ಒಟ್ಟು 206 ದೇಶಗಳು ಪ್ರತಿನಿಧಿಸುತ್ತಿವೆ. ರಿಯೋ ಒಲಿಂಪಿಕ್ಸ್‍ನಲ್ಲಿ 28 ಕ್ರೀಡೆಗಳು ಜರುಗಲಿದ್ದು, ಒಟ್ಟು 11,239 ಸ್ಪರ್ಧಿಗಳು ಪದಕಗಳಿಗಾಗಿ ತೀವ್ರ ಪೈಪೋಟಿ ನಡೆಸಲಿದ್ದಾರೆ. ಭಾರತದಿಂದ ಒಟ್ಟು 119 ಕ್ರೀಡಾಪಟುಗಳು ತಮ್ಮ ಶಕ್ತಿ-ಸಾಮಥ್ರ್ಯವನ್ನು ಪಣಕ್ಕೊಡಲು ಕಾತುರರಾಗಿದ್ದಾರೆ.  ಯುರೋಪ್ ಸೇರಿದಂತೆ ವಿವಿಧ ದೇಶಗಳಲ್ಲಿ ಇತ್ತೀಚೆಗೆ ಭಯೋತ್ಪಾದಕರ ಆಕ್ರಮಣ ಪ್ರಕರಣಗಳು ಮತ್ತು ಹಿಂಸಾಚಾರ ತೀವ್ರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರಿಯೋ ಸೇರಿದಂತೆ ಒಲಿಂಪಿಕ್ ಕ್ರೀಡಾಕೂಟ ನಡೆಯುವ ಬ್ರೆಜಿಲ್‍ನ ಐದು ಮಹಾನಗರಗಳಲ್ಲಿ ಹಿಂದೆಂದೂ ಕಂಡ ಕೇಳರಿಯಂಥ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

CpJTBkPUAAAkULN

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin