ಕತ್ತಲಲ್ಲಿ ಬಾವಿಗೆ ಬಿದ್ದ ಕರಡಿ

ಈ ಸುದ್ದಿಯನ್ನು ಶೇರ್ ಮಾಡಿ

bear

ರಾಮನಗರ, ಆ.21- ಆಹಾರ ಅರಸಿ ಬಂದ ಕರಡಿಯೊಂದು 20 ಅಡಿ ಆಳದ ಬಾವಿಗೆ ಬಿದ್ದಿದೆ. ಚೌಡೇಶ್ವರಿಹಳ್ಳಿಯ ಶಿವರಾಜು ಎಂಬುವರ ತೋಟದ ಬಾವಿಗೆ ಕರಡಿ ಬಿದ್ದಿದ್ದು, ಇಂದು ಬೆಳಗ್ಗೆ ತೋಟದ ಮಾಲೀಕ ಅಲ್ಲಿಗೆ ತೆರಳಿದ್ದಾಗ ಈ ವಿಷಯ ತಿಳಿದಿದೆ. ನಿನ್ನೆ ರಾತ್ರಿ ಆಹಾರ ಅರಸಿ ಬಂದ ಕರಡಿ ಕತ್ತಲಲ್ಲಿ ಬಾವಿಗೆ ಬಿದ್ದಿದೆ. ಬಾವಿಗೆ ಬಿದ್ದಿರುವ ಕರಡಿಯನ್ನು ರಕ್ಷಿಸಲು ಈಗಾಗಲೇ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ.  20 ಅಡಿ ಆಳದ ಬಾವಿಗೆ ಏಣಿಯನ್ನು ಬಿಟ್ಟಿದ್ದು, ಕರಡಿ ಎತ್ತರದಿಂದ ಕೆಳಗೆ ಬಿದ್ದಿರುವುದರಿಂದ ಗಾಯಗೊಂಡಿದ್ದು, ಏಣಿ ಹತ್ತಲು ಆಗದೆ ಬಳಲಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಕರಡಿ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin