ಕತ್ತು ಹಿಸುಕಿ ಮಹಿಳೆಯ ಕೊಲೆ

ಈ ಸುದ್ದಿಯನ್ನು ಶೇರ್ ಮಾಡಿ

hasana

ಹಾಸನ, ಆ.30- ಹಳೇಬೀಡು ರಸ್ತೆ ಬದಿಯಲ್ಲಿ ಮಹಿಳೆಯೊಬ್ಬರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ.  ಬೇಲೂರು ಪಟ್ಟಣದ ಹೊರ ವಲಯದಲ್ಲಿರುವ ನೀರಾವರಿ ಇಲಾಖೆಯ ಕಚೇರಿ ಸಮೀಪ ಸುಮಾರು 40 ರಿಂದ 45 ವರ್ಷದ ಮಹಿಳೆ ಶವ ಇಂದು ಬೆಳಗ್ಗೆ ಪತ್ತೆಯಾಗಿದೆ.ಕುತ್ತಿಗೆಗೆ ವೈಯರ್‍ನಿಂದ ಬಿಗಿದು ಹತ್ಯೆ ಮಾಡಿರುವುದು ತಿಳಿದು ಬಂದಿದ್ದು, ಈಕೆ ಯಾರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ತಲೆಗೂ ಕೂಡ ಪೆಟ್ಟು ಬಿದ್ದಿದ್ದು, ಹತ್ತಿರದಲ್ಲೇ ಕಲ್ಲಿನ ಮೇಲೆ ರಕ್ತದ ಕಲೆ ಕಂಡು ಬಂದಿದೆ.ಮಹಿಳೆಯನ್ನು ಇಲ್ಲಿಗೆ ಕರೆ ತಂದು ದುಷ್ಕರ್ಮಿಗಳು ಹತ್ಯೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin