ಕತ್ರೀನಾ ಸೀಕ್ರೇಟ್ ಆಗಿ ಲಂಡನ್ ಗೆ ಹೋಗಿದ್ಯಾಕೆ…?

ಈ ಸುದ್ದಿಯನ್ನು ಶೇರ್ ಮಾಡಿ

Katrina

ಬಾಲಿವುಡ್‍ನ ಬಿಂದಾಸ್ ತಾರೆಯರು ಕೆಲವು ದಿನಗಳು ಕಾಣದಿದ್ದರೆ ಹಲವಾರು ಗಾಳಿ ಸುದ್ದಿಗಳು ಹರಡಲಾರಂಭಿಸುತ್ತವೆ. ಹಾಗಂತೆ-ಹೀಗಂತೆ-ಹಾಗಾಯಿತಂತೆ ಎಂಬ ಗುಸುಗುಸು ಮಾತುಗಳೂ ಕೇಳಿ ಬರುತ್ತವೆ. ಬಿ-ಟೌನ್‍ನ ನೀಳಕಾಯದ ಬೆಡಗಿ ಕತ್ರೀನಾ ಕೈಫ್ ಯಾನೆ ಕ್ಯಾಟ್ ವಿಷಯದಲ್ಲಿ ಆಗಿದ್ದು ಕೂಡ ಇದೆ. ಕತ್ರೀನಾ ಕೆಲವು ದಿನಗಳ ಗೋಪ್ಯವಾಗಿ ಲಂಡನ್‍ಗೆ ಹಾರಿದ್ದಳು. ಆಕೆ ದಿಢೀರ್ ನಾಪತ್ತೆಯಾಗಿದ್ದು ಏಕೆ ಎಂಬ ಬಗ್ಗೆ ಅಭಿಮಾನಿಗಳಲ್ಲಿ ಚರ್ಚೆ ನಡೆದಿತ್ತು. ಆದರೆ ಕೈಟ್ ಲಂಡನ್ ಟ್ರಿಪ್ ಸಿಕ್ರೇಟ್ ಈಗ ಬಯಲಾಗಿದೆ. ಸದಾ ಚಟುವಟಿಕೆಯಿಂದಿರುವ ಕ್ಯಾಟ್ ತನ್ನ ಮಹತ್ವಾಕಾಂಕ್ಷಿ ಫ್ಯಾಷನ್ ರಿಟೈಲ್ ವಹಿವಾಟು ಆರಂಭಿಸಲಿದ್ದು, ಅದರ ಸಂಬಂಧ ಮಾತುಕತೆ ನಡೆಸಲು ಇಂಗ್ಲೆಂಡ್ ರಾಜಧಾನಿಗೆ ತೆರಳಿದ್ದಳು. ಬಾಲಿವುಡ್ ನಟಿ ತನ್ನ ನವೋದ್ಯಮದ ಬಗ್ಗೆ ಈ ಹಿಂದೆಯೇ ಘೋಷಿದ್ದಳು ಕೂಡ.

ಈ ಉದ್ಯಮಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ಕಾರ್ಯಗಳನ್ನು ಪೂರ್ಣಗೊಳಿಸಲು ಕತ್ರೀನಾ ಲಂಡನ್‍ಗೆ ಭೈೀಟಿ ನೀಡಿದ್ಧಾಳೆ. ಪಶ್ಚಿಮ ಲಂಡನ್‍ನ ಕೆನ್ಸಿಂಗ್‍ಟನ್ ಅತ್ಯಂತ ಐಷಾರಾಮಿ ವಸ್ತುಗಳ ಮಳಿಗೆಗಳಿರುವ ಗ್ಲೌಸ್‍ಸ್ಟೆರ್ ರಸ್ತೆಯಲ್ಲಿ ಕ್ಯಾಟ್ ವಾಕ್ ಮಾಡುತ್ತಿದ್ದುದನ್ನು ಕೆಲವರು ನೋಡಿದ್ದಾರೆ. ಫಿತೂರ್ ಮತ್ತು ಬಾರ್ ಬಾರ್ ದೇಖೋ ಚಿತ್ರಗಳಲ್ಲಿ ಕ್ಯಾಟ್ ನಟಿಸಿದ್ದಳು. ತನ್ನ ಮಾಜಿ ಪ್ರಿಯಕರ ರಣಬೀರ್ ಕಪೂರ್ ಜೊತೆ ಅಭಿನಯಿಸಿರುವ ಜಗ್ಗ ಜಾಸೂಸ್ ಸಿನಿಮಾ ನಂತರ ಕ್ಯಾಟ್ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಫಿಲ್ಮ್ ಮತ್ತು ಫ್ಯಾಷನ್-ಈ ಎರಡರಲ್ಲೂ ತೊಡಗಿರುವ ಕತ್ರೀನಾ ಕೈಫ್ ವ್ಯವಹಾರದಲ್ಲಿ ತುಂಬಾ ಬುದ್ದಿವಂತಳು.

► Follow us on –  Facebook / Twitter  / Google+

Facebook Comments

Sri Raghav

Admin