ಕದ್ದುಮುಚ್ಚಿ 2ನೇ ಮದುವೆಯಾದ ಪತಿ, ಮೊದಲ ಹೆಂಡತಿಗೆ 2ನೇ ಹೆಂಡತಿ ಕ್ಲಾಸ್

ಈ ಸುದ್ದಿಯನ್ನು ಶೇರ್ ಮಾಡಿ

Marriage--01

ಹಾವೇರಿ, ಅ.5-ಕದ್ದುಮುಚ್ಚಿ ಎರಡನೆ ಮದುವೆಯಾದ ಪತಿಯನ್ನು ಹಿಗ್ಗಾಮುಗ್ಗಾ ಜಾಡಿಸಿದ ಘಟನೆ ನಗರದ ನಾಗಸಂದ್ರ ಮಟ್ಟಿಬೀದಿಯಲ್ಲಿ ನಡೆದಿದೆ. ಚಂದ್ರಶೇಖರ್ ಎಂಬಾತ ಕಳೆದ 2016ರಲ್ಲಿ ದ್ಯಾಮಕ್ಕ ಮಂಟೂರು ಎಂಬುವವರನ್ನು ವಿವಾಹವಾಗಿದ್ದರು. 2017ರಲ್ಲಿ ಸಂಸಾರದಲ್ಲಿ ವಿರಸ ಕಂಡು ಇಬ್ಬರು ಜಗಳವಾಡಿಕೊಂಡಿದ್ದರು. ಇದು ಪೊಲೀಸ್ ಠಾಣೆ ಮೆಟ್ಟಿಲೇರಿ ನಂತರ ನ್ಯಾಯಾಲಯದಲ್ಲೂ ಪ್ರಕರಣ ದಾಖಲಾಗಿತ್ತು.

ಇದರ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲೇ ಚಂದ್ರಶೇಖರ್ ಇತ್ತೀಚೆಗೆ ಎರಡನೆ ಮದುವೆಯಾಗಿದ್ದ. ಇದರಿಂದ ರೊಚ್ಚಿಗೆದ್ದ ಮೊದಲ ಪತ್ನಿ ಇಂದು ಪತಿಯನ್ನು ಹುಡುಕಿಕೊಂಡು ಹೋಗಿದ್ದಾರೆ. ಆತ ಎರಡನೆ ಪತ್ನಿ ಮನೆಯಲ್ಲಿರುವುದನ್ನು ಅರಿತು ಏಕಾಏಕಿ ಒಳನುಗ್ಗಿದ್ದಾಳೆ.  ಚಂದ್ರಶೇಖರ್‍ನನ್ನು ಹಿಡಿದು ಚೆನ್ನಾಗಿ ಜಾಡಿಸಿದ್ದಾಳೆ. ಕೂಗಾಟ ಕೇಳಿಸಿಕೊಂಡ ಅಕ್ಕಪಕ್ಕದವರು ಬಂದು ಜಗಳ ಬಿಡಿಸಲು ಮುಂದಾದರೂ ಜಗ್ಗದ ದ್ಯಾಮಕ್ಕ ಆತನ ಬಟ್ಟೆ ಹಿಡಿದುಕೊಂಡು ಹೊರಗೆ ಎಳೆತಂದು ಮತ್ತೆ ಸ್ಥಳೀಯರೊಂದಿಗೆ ಜಾರಿ ಥಳಿಸಿದ್ದಾಳೆ.

Facebook Comments

Sri Raghav

Admin