ಕನಿಕರ ತೋರದೇ ನಿಜವಾದ ರೈತ ನಾಯಕರನ್ನು ಆಯ್ಕೆ ಮಾಡಿ : ಅನಿತಾ ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

Anitha-Kumaraswamy

ಪಾಂಡವಪುರ, ಏ.24- ಸ್ವಯಂ ಘೋಷಿತ ರೈತನಾಯಕರು ಎಂದು ಹೇಳಿಕೊಂಡು ತಿರುಗಾಡುತ್ತಿರುವವರ ಮೇಲೆ ಯಾವುದೇ ಕನಿಕರ ತೋರಬೇಡಿ. ಒಂದು ವೇಳೆ ಕನಿಕರ ತೋರಿ ಅವರಿಗೆ ಮತ ನೀಡಿದರೆ ಮುಂದೆ ಕ್ಷೇತ್ರದಲ್ಲಿ ನಿಮ್ಮ ಮೇಲೆ ಕನಿಕರ ತೋರುವವರು ಯಾರೂ ಇರುವುದಿಲ್ಲ. ಆದ್ದರಿಂದ ನಿಜವಾದ ರೈತ ನಾಯಕರನ್ನು ಆಯ್ಕೆ ಮಾಡಿಕೊಳ್ಳಿ ಎಂದು ಅನಿತಾ ಕುಮಾರಸ್ವಾಮಿ ಹೇಳಿದರು.

ಪಟ್ಟಣದಲ್ಲಿ ನಡೆದ ಜೆಡಿಎಸ್‍ನ ಬೃಹತ್ ಬಹಿರಂಗ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರೈತರ ಬಗ್ಗೆ ಕಾಳಜಿ ಮನಸ್ಸಿನಿಂದ ಬರಬೇಕು. ನಿಜವಾದ ರೈತ ನಾಯಕರು ಎಚ್.ಡಿ.ದೇವೇಗೌಡರು ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರು. ಅವರಂತೆಯೇ ಸಿ.ಎಸ್.ಪುಟ್ಟರಾಜು ಕೂಡ ಕ್ಷೇತ್ರದ ಸರ್ವಜನಾಂಗವನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಜವಾದ ರೈತನಾಯಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಐಸಿಸಿ ಸಭೈಯ ತೀರ್ಮಾನದಂತೆ ಕೆಆರ್‍ಎಸ್ ಅಚ್ಚುಕಟ್ಟಿನ ಎಲ್ಲಾ ನಾಲೆಗಳಿಗೆ ತಕ್ಷಣದಲೇ ನೀರು ಹರಿಸಬೇಕು. ಇಲ್ಲವಾದರೆ ಜಿಲ್ಲೆಯಲ್ಲಿ ಸಿದ್ದರಾಮಯ್ಯ ಚುನಾವಣಾ ಪ್ರಚಾರ ನಡೆಸಲು ಬಿಡುವುದಿಲ್ಲ, ದೇವೇಗೌಡರ ಶ್ರೀರಕ್ಷೆ, ಕುಮಾರಸ್ವಾಮಿಯವರ ಆಶೀರ್ವಾದ ಹಾಗೂ ಅನಿತಾ ಕುಮಾರಸ್ವಾಮಿಯವರ ಆತ್ಮಸ್ಥೈರ್ಯದಿಮದ ಕ್ಷೇತ್ರದ ಜನತೆಯ ಕಣ್ಣೊರೆಸುವ ಕೆಲಸ ಮಾಡುವೆ ಎಂದು ಹೇಳಿದರು. ಮಾಜಿ ಶಾಸಕ ಶಿವರಾಮೇಗೌಡ, ಶಾಸಕ ಕೆ.ಟಿ.ಶ್ರೀಕಂಠೇಗೌಡ, ನಾಗಮ್ಮ ಪುಟ್ಟರಾಜು, ಲಕ್ಷ್ಮೀ ಅಶ್ವಿನ್‍ಗೌಡ, ಶಿವರಾಜು ಪುಟ್ಟರಾಜು, ಜಿಪಂ ಸದಸ್ಯರಾದ ಸಿ.ಅಶೋಕ್, ಸಾಮಿಲ್ ತಿಮ್ಮೇಗೌಡ, ಪುರಸಭೆ ಅಧ್ಯಕ್ಷೆ ತಾಯಮ್ಮ ಸೇರಿದಂತೆ ಇತರರು ಇದ್ದರು.

Facebook Comments

Sri Raghav

Admin