ಕನಿಷ್ಠ ಕೂಲಿ ನೀಡದ ಮಾಲೀಕರಿಗೆ 10 ಸಾವಿರ ರೂ. ದಂಡ, 6 ತಿಂಗಳು ಜೈಲು

ಈ ಸುದ್ದಿಯನ್ನು ಶೇರ್ ಮಾಡಿ

Santosh-Lad--01

ಬೆಂಗಳೂರು, ಫೆ.10- ಕನಿಷ್ಠ ಕೂಲಿ ನೀಡದೆ ಸತಾಯಿಸುವ ಮಾಲೀಕರಿಗೆ 10ಸಾವಿರದವರೆಗೂ ದಂಡ ಮತ್ತು 6 ತಿಂಗಳ ಜೈಲು ಶಿಕ್ಷೆ ವಿಧಿಸುವ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿಂದು ಮಂಡಿಸಲಾಯಿತು.  ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು, ಕನಿಷ್ಠ ಮಜೂರಿಗಳ ತಿದ್ದುಪಡಿ ವಿಧೇಯಕ-2017ಅನ್ನು ಇಂದು ಕಲಾಪ ಆರಂಭದಲ್ಲೇ ಮಂಡಿಸಿದರು.  1948ರ ಮೂಲ ಕಾಯ್ದೆ, ಸೆಕ್ಷನ್ 20, 22,22ಎಗೆ ತಿದ್ದುಪಡಿ ತರಲಾಗಿದೆ. ಮೂಲ ಕಾಯ್ದೆ ಸೆಕ್ಷನ್ 20ರಲ್ಲಿ ಯಾವುದೇ ವ್ಯಕ್ತಿ ಕನಿಷ್ಠ ಕೂಲಿ ಕೊಡದೆ ಸತಾಯಿಸಿದರೆ ಅಥವಾ ಕಿರುಕುಳ ಕೊಟ್ಟರೆ ಅಂತಹ ವ್ಯಕ್ತಿಯ ವಿರುದ್ಧ ಕಾರ್ಮಿಕ ಇಲಾಖೆಯ ಆಯುಕ್ತರು ಕೇಂದ್ರ ಸರ್ಕಾರದ ಅಧಿಕಾರಿ ಅಥವಾ ಸಿವಿಲ್ ನ್ಯಾಯಾಧೀಶರಿಗೆ ದೂರು ನೀಡಬೇಕು ಎಂದು ಉಲ್ಲೇಖಿಸಲಾಗಿತ್ತು.

ಕಡಿಮೆ ವೇತನಕ್ಕೆ ಕೆಲಸ ಮಾಡುವ ವ್ಯಕ್ತಿಗಳು ಆಯುಕ್ತರ ಹಂತದವರೆಗೂ ದೂರು ತೆಗೆದುಕೊಂಡು ಹೋಗುವ ಕಷ್ಟಗಳನ್ನು ಅರಿತಿರುವ ರಾಜ್ಯ ಸರ್ಕಾರ ಮೂಲ ಕಾಯ್ದೆಗೆ ತಿದ್ದುಪಡಿ ತಂದಿದ್ದು, ಆಯುಕ್ತರ ಬದಲಾಗಿ ಸಹಾಯಕ ಕಾರ್ಮಿಕ ಆಯುಕ್ತರ ದರ್ಜೆಯ ಅಧಿಕಾರಿ ಬಳಿ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.  ಈ ಮೂಲ ಕಾಯ್ದೆಯಲ್ಲಿ ದಂಡದ ಪ್ರಮಾಣವನ್ನು 500ರೂ. ಮತ್ತು 6 ತಿಂಗಳ ಜೈಲು ಶಿಕ್ಷೆಯನ್ನು ನಿಗದಿ ಮಾಡಲಾಗಿತ್ತು. ಅದಕ್ಕೆ ತಿದ್ದುಪಡಿ ತಂದು ದಂಡದ ಪ್ರಮಾಣವನ್ನು 5ರಿಂದ 10ಸಾವಿರ ರೂ.ವರೆಗೂ ಹೆಚ್ಚಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin