ಕನ್ನಡದಲ್ಲೂ ಬಾಹುಬಲಿ…?!

ಈ ಸುದ್ದಿಯನ್ನು ಶೇರ್ ಮಾಡಿ

Bahubali-01ಬೆಂಗಳೂರು,ಫೆ.17-ದಾಖಲೆ ನಿರ್ಮಿಸಿದ ಬಹುದೊಡ್ಡ ಸಿನಿಮಾ ಬಾಹುಬಲಿ ಕನ್ನಡಕ್ಕೆ ಬರಲಿದೆಯೇ? ರಾಜಮೌಳಿ ನಿರ್ಮಾಣದ ಪ್ರಬಾಸ್, ತಮ್ಮನ್ನಾ, ಅನುಷ್ಕಾ ಶೆಟ್ಟಿ , ರಾಣಾ ಅಭಿನಯದ ಬಾಹುಬಲಿ ಚಿತ್ರದ ಹಿಂದಿ, ತಮಿಳು, ಮಲೆಯಾಳಂನಲ್ಲಿ ಡಬ್ಬಿಂಗ್ ಆಗಿ ವಿಶ್ವ ದಾಖಲೆ ನಿರ್ಮಿಸಿತ್ತು.   ಈಗ ಬಾಹುಬಲಿ-2 ಚಿತ್ರ ನಿರ್ಮಾಣವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವು ಕನ್ನಡದಲ್ಲಿ ಡಬ್ ಆಗಿ ಬರುವ ಸಾಧ್ಯತೆ ಕೇಳಿಬರುತ್ತಿದೆ. ಡಬ್ಬಿಂಗ್ ವಾಣಿಜ್ಯ ಮಂಡಳಿಯ ಅಧ್ಯಕ್ಷ ಕೃಷ್ಣಗೌಡರ ಪ್ರಕಾರ ಬಾಹುಬಲಿ-1 ಚಿತ್ರವನ್ನು ತಾವೇ ಡಬ್ ಮಾಡಿ ಬಿಡುಗಡೆ ಮಾಡಲು ಸಿದ್ದರಿದ್ದಾರಂತೆ. ಆದರೆ ಭಾಗ 2ನ್ನು ಮೂಲ ನಿರ್ಮಾಪಕರೇ ಡಬ್ ಮಾಡಿ ಬಿಡುಗಡೆ ಮಾಡಿದರೆ ಕನ್ನಡಿಗರು ಕೂಡ ಈ ಅದ್ಧೂರಿ ಚಿತ್ರವನ್ನು ನೋಡಿ ಆನಂದಿಸಬಹುದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಡಬ್ಬಿಂಗ್ ವಿರುದ್ದ ಕನ್ನಡ ವಾಟಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸೇರಿದಂತೆ ಹಲವು ಕನ್ನಡ ಸಂಘಟನೆಗಳು ಧ್ವನಿ ಎತ್ತಿವೆ. ಕನ್ನಡ ಉಳಿಸಬೇಕು, ನಾಡು-ನುಡಿ ಉಳಿಸಬೇಕೆಂದು ಆಗಿನಿಂದಲೂ ಹೋರಾಟ ಮಾಡುತ್ತಾ ಬಂದಿದ್ದಾರೆ. ಈಗ ಡಬ್ಬಿಂಗ್ ವಿಚಾರದಲ್ಲಿ ಬಹಳಷ್ಟು ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು , ಮುಂದೆ ಯಾವ ರೀತಿ ಸ್ವರೂಪ ಪಡೆಯಲಿದೆ ಎಂದು ಕಾದು ನೋಡಬೇಕಾಗಿದೆ.   ಡಬ್ಬಿಂಗ್ ಮಾರಕವೋ, ವರವೋ ಎಂದು ಯಕ್ಷ ಪ್ರಶ್ನೆಯಾಗಿದ್ದು, ಬಾಹುಬಲಿ 2ನೇ ಭಾಗವು ಕನ್ನಡಕ್ಕೆ ಅನುವಾದವಾಗುವುದೇ ಇಲ್ಲವೇ ಎಂಬುದು ಕಾದು ನೋಡಬೇಕಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin