ಕನ್ನಡದ ಘನತೆಗೆ ಧಕ್ಕೆಯಾದಾಗ ನಾವೆಲ್ಲರೂ ಒಂದಾಗೋಣ : ಡಿವಿಎಸ್

ಈ ಸುದ್ದಿಯನ್ನು ಶೇರ್ ಮಾಡಿ

KURUBA

ಬೆಂಗಳೂರು, ಜ.28-ಕನ್ನಡದ ಘನತೆಗೆ ಧಕ್ಕೆಯಾದಾಗ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಅಗತ್ಯವಿದೆ. ಅದಕ್ಕೆ ಇಂತಹ ಕಾರ್ಯಕ್ರಮಗಳು ಸಂದೇಶವಾಗಲಿವೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಇಂದಿಲ್ಲಿ ಹೇಳಿದರು.  ಚಾಲುಕ್ಯ ಡಾ.ರಾಜ್‍ಕುಮಾರ್ ಟ್ರಸ್ಟ್ ನಗರದ ಕುರುಬರಹಳ್ಳಿಯ ಕುಮಾರವ್ಯಾಸ ವೃತ್ತದಲ್ಲಿ ಏರ್ಪಡಿಸಿದ್ದ ವೈಭವದ ಕನ್ನಡ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡದ ಅಳಿವು, ಉಳಿವು ನಮ್ಮೆಲ್ಲರ ಕೈಯಲ್ಲಿದೆ. ನಮ್ಮ ಭಾಷೆ, ಸಂಸ್ಕøತಿಗೆ ಧಕ್ಕೆಯಾದಾಗ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಅಗತ್ಯವಿದೆ.

ಇಂತಹ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಸೇರುವ ಪ್ರಮಾಣದ ಜನಸಂಖ್ಯೆ ಆಳುವ ಸರ್ಕಾರಗಳಿಗೆ ಸಂದೇಶವನ್ನು ಮುಟ್ಟಿಸುತ್ತವೆ. ಇದು ನಮ್ಮ ಕನ್ನಡದ ಶಕ್ತಿ ಎಂದು ಹೇಳಿದರು.
ನಾಡಿನ ಜನರಿಗೆ ಯಾವುದೇ ರೀತಿ ತೊಂದರೆಯಾದರೂ ಕೂಡ ಸಂಘಟನಾತ್ಮಕ ಹೋರಾಟ ಮಾಡಬೇಕು. ಕರ್ನಾಟಕ ರಕ್ಷಣಾ ವೇದಿಕೆ ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಧ್ವಜ ಬೆಳಗಾವಿ ಪಾಲಿಕೆಯಲ್ಲಿ ಹಾರಾಡಿದಾಗ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಆ ಪಾಲಿಕೆಯನ್ನು ನಾನು ನಿರ್ದಾಕ್ಷಿಣ್ಯವಾಗಿ ವಜಾ ಮಾಡಿದ್ದೆ ಎಂದು ಸ್ಮರಿಸಿಕೊಂಡರು.

jani 2

ಕನ್ನಡದ ಮನಸ್ಸುಗಳನ್ನು ಒಟ್ಟು ಮಾಡಿ ವರನಟ ಡಾ.ರಾಜ್‍ಕುಮಾರ್ ಅವರ ಕನ್ನಡದ ಹೋರಾಟವನ್ನು ಸ್ಮರಿಸುವಂತಹ ಕೆಲಸ ಮಾಡುತ್ತಿರುವ ಎಂ.ನಾಗರಾಜ್, ಚಾಲುಕ್ಯ ಡಾ.ರಾಜ್‍ಕುಮಾರ್ ಟ್ರಸ್ಟ್ ಪದಾಧಿಕಾರಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಚಾಲುಕ್ಯ ಡಾ.ರಾಜ್‍ರತ್ನ ಪ್ರಶಸ್ತಿ ಸ್ವೀಕರಿಸಿದ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಪರಕೀಯ ಭಾವನೆ ಉಂಟಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡದ ಮನಸ್ಸುಗಳನ್ನು ಜಾಗೃತಿ ಮೂಡಿಸುವಂತಹ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಯಾವ ತ್ಯಾಗವನ್ನಾದರೂ ಮಾಡಿ ಕನ್ನಡ ಕಟ್ಟುವಲ್ಲಿ ರಕ್ಷಣಾ ವೇದಿಕೆ ತನ್ನ ಕಾಯಕವನ್ನು ಮಾಡುತ್ತಿದೆ ಎಂದು ಹೇಳಿದರು.

ಪ್ರಸ್ತಾವಿಕ ಭಾಷಣ ಮಾಡಿದ ಎಂ.ನಾಗರಾಜ್ ಅವರು, ಡಾ.ರಾಜ್‍ಕುಮಾರ್ ಅವರು ಕನ್ನಡ ಹೋರಾಟಕ್ಕೆ ಸ್ಫೂರ್ತಿ. ಗೋಕಾಕ್ ಚಳವಳಿ ಮೂಲಕ ಕನ್ನಡದ ಕಹಳೆಯನ್ನು ಮೊಳಗಿಸಿದರು. ಅಂಥಹವರ ಐತಿಹಾಸಿಕ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಿ ಕನ್ನಡ ಹೋರಾಟಕ್ಕೆ ಬುನಾದಿ ಹಾಕಿದ್ದೇವೆ. ಇಲ್ಲಿನ ಚಾಲುಕ್ಯ ಡಾ.ರಾಜ್‍ಕುಮಾರ್ ಟ್ರಸ್ಟ್ ಪದಾಧಿಕಾರಿಗಳ ಸಕ್ರಿಯ ಸಹಕಾರ ಎಲ್ಲಾ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಇಂತಹ ಕಾರ್ಯಕ್ರಮ ನಡೆಸಲು ಸಾಧ್ಯವಾಗಿದೆ ಎಂದು ಹೇಳಿದರು.  ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲಯ್ಯ ಮಾತನಾಡಿ, ಮಹಾಲಕ್ಷ್ಮಿ ಲೇಔಟ್‍ನಲ್ಲಿ ವರನಟ ಡಾ.ರಾಜ್‍ಕುಮಾರ್ ಅವರ ಸಮಾಧಿ ಇದೆ. ಅದೇ ರೀತಿ ಅದ್ಭುತವಾದ ಪ್ರತಿಮೆಯೂ ಇದೆ. ಈ ಕ್ಷೇತ್ರದ ಶಾಸಕನಾಗಿ ಹತ್ತು, ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಕನ್ನಡದ ಅಭಿವೃದ್ಧಿಗೆ ಯಾವತ್ತೂ ಶ್ರಮಿಸುವುದಾಗಿ ಹೇಳಿದರು.

jani 3

ಪರಿಸರ ಪ್ರೇಮಿ ನಾಡೋಜ ಸಾಲುಮರದ ತಿಮ್ಮಕ್ಕ ಅವರಿಗೆ ಡಾ.ರಾಜ್ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ನಿರ್ಮಾಪಕರಾದ ಕುಳ್ಳ ಶಾಂತಣ್ಣ, ರಂಗಭೂಮಿ ಕಲಾವಿದರಾದ ಬುದ್ಧಿರಂಗಪ್ಪ,ಚಲುವರಾಜ ಕದಂಬ, ವೃದ್ಧಾಶ್ರಮದ ಅಧ್ಯಕ್ಷ ಗೋವಿಂದರಾಜ್ ಮತ್ತಿತರರನ್ನು ಸನ್ಮಾನಿಸಲಾಯಿತು. ಉಪಮೇಯರ್ ಹೇಮಲತಾ ಗೋಪಾಲಯ್ಯ, ಎಸ್.ಹರೀಶ್, ಬಿಬಿಎಂಪಿ ಸದಸ್ಯರಾದ ಭದ್ರೇಗೌಡ, ಗಂಗಮ್ಮರಾಜಣ್ಣ, ಎಂ.ಮಹದೇವ್, ಚಲನಚಿತ್ರ ನಿರ್ಮಾಪಕ ಸುರೇಶ್ ಗೌಡ್ರು, ಡಾ.ಗೋಪಾಲ್, ಶ್ರೀನಿವಾಸ್ ಸೇರಿದಂತೆ ಅನೇಕರು ಭಾಗವಹಿಸಿದ್ದ ಸಮಾರಂಭದಲ್ಲಿ ಡ್ರಾಮಾ ಜ್ಯೂನಿಯರ್ ಖ್ಯಾತಿಯ ಪುಟಾಣಿ ಕಲಾವಿದರು, ಅಶ್ವಥ ಮರ ಖ್ಯಾತಿಯ ಕಲಾವಿದರು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin