ಕನ್ನಡದ ಮೊದಲ ಶಾಯಿರಿ ಕವಿ ಇಟಗಿ ಈರಣ್ಣ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Itagi-Iranna

ಶಿವಮೊಗ್ಗ. ಮಾ.13 : ಕನ್ನಡ ಮೊದಲ ಶಾಯಿರಿ ಕವಿ ವಿ ಪ್ರೊ. ಇಟಗಿ ಈರಣ್ಣನವರು ನಿಧನರಾಗಿದ್ದಾರೆ. ಕನ್ನಡ ಉಪನ್ಯಾಸಕರಾಗಿ, ಕವಿಯಾಗಿ, ನಾಟಕಕಾರರಾಗಿ ರಂಗಭೂಮಿಗೆ ನಾನು ನೀನು ರಾಜಿ ಏನ್ ಮಾಡ್ತಾನ್ ಖಾಜಿ, ರಾವಿ ನದಿಯ ದಂಡೆ, ತಾಜ್ ಮಹಲ್ ಟೆಂಡರ್, ಯಹೂದಿ ಹುಡುಗಿ ನಾಟಕಗಳನ್ನು ಅನುವಾದ ಮಾಡಿ , ಶಾಯರಿಗಳನ್ನು ಕನ್ನಡಕ್ಕೆ ಪರಿಚಯಿಸಿದ ಹೆಗ್ಗಳಿಕೆ ಈರಣ್ಣನವರದು.  ರೂಪಾಂತರದ ಹಿತೈಷಿಗಳಾದ ಈರಣ್ಣನವರು. ಶಾಹಿರಿ ಮೂಲಕ ಈರಣ್ಣ ಕನ್ನಡ ಸಾರಸ್ವತ ಲೋಕದಲ್ಲಿ ಗಮನಾರ್ಹ ಕೆಲಸ ಮಾಡಿದ್ದಾರೆ. ಅವರ ನಿಧನದಿಂದ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಬಳ್ಳಾರಿ, ಹೊಸಪೇಟೆ, ಹೂವಿನ ಹಡಗಲಿಯಲ್ಲಿ ಈರಣ್ಣ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. ಅವರು ಶಿವಮೊಗ್ಗದಲ್ಲಿ ನೆಲೆಸಿ, ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು.  ಅವರ ಅಂತ್ಯಕ್ರಿಯೆಯನ್ನು ಇಂದು ಮಂಡ್ಲಿಯ ವೀರಶೈವ ರುದ್ರಭೂಮಿಯಲ್ಲಿ ಅಪರಾಹ್ನ 03.00ಕ್ಕೆ ನೆರವೇರಲಿದೆ .

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin