ಕನ್ನಡಲ್ಲೂ ‘ಕಾದಲ್’

ಈ ಸುದ್ದಿಯನ್ನು ಶೇರ್ ಮಾಡಿ

kadhal-1
ಕಾದಲ್ ಎಂದರೆ ತಮಿಳು ಭಾಷೆಯಲ್ಲಿ ಪ್ರೀತಿ ಎನ್ನುತ್ತಾರೆ, ಆ ಹೆಸರಿನಲ್ಲಿ ನಿರ್ಮಾಣವಾದ ತಮಿಳು ಚಿತ್ರ ಸೂಪರ್‍ಹಿಟ್ ಆಗಿತ್ತು. ಈಗ ಕನ್ನಡ ಭಾಷೆಯಲ್ಲಿ ನಿರ್ಮಾಣವಾಗಿರುವ ಮತ್ತೊಂದು ಚಿತ್ರಕ್ಕೆ ಕಾದಲ್ ಎಂದು ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಮೊನ್ನೆ ನಡೆಯಿತು. 45 ದಿನಗಳ ಕಾಲ ಬೆಂಗಳೂರು, ಚಿಕ್ಕಮಗಳೂರು, ಮೈಸೂರು ಸುತ್ತಮುತ್ತ ಚಿತ್ರೀಕರಣವನ್ನು ಕೂಡ ಮುಗಿಸಿರುವ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಸಹಾಯಕ ನಿರ್ದೇಶಕನೊಬ್ಬ ಅರಿವಿಲ್ಲದೆ ಕ್ಯಾನ್ಸರ್ ಪೀಡಿತ ಯುವತಿಯನ್ನು ಪ್ರೀತಿಸುತ್ತಾನೆ.kadhal-2

ನಂತರ ಆತ ತನ್ ಕನಸಿನ ಚಿತ್ರವನ್ನು ನಿರ್ದೇಶನ ಮಾಡುತ್ತಾನೋ? ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ಸಫಲನಾಗುತ್ತಾನಾ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಈ ಹಿಂದೆ ಮುಮ್ತಾಜ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದ ನಿರ್ದೇಶಕ ಮುರುಳಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ . ಛೇಂಬರ್‍ನಲ್ಲಿ ಶೀರ್ಷಿಕೆ ನೊಂದಣಿ ಮಾಡಿಸಲು ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದಾಗ ಅದು ಕನ್ನಡದ ಪದವಲ್ಲವೆಂದು ಆಕ್ಷೇಪಣೆ ಬಂದಿದೆ. ನಂತರ ಹಳಗನ್ನಡ ನಿಘಂಟಿನಲ್ಲಿ ಆ ಪದ ಇರುವುದನ್ನು ಮನವರಿಕೆ ಮಾಡಿಸಿ ಅದೇ ಟೈಟಲ್‍ನ್ನು ಮುರುಳಿಪಡೆದುಕೊಂಡಿದ್ದಾರೆ .
ಒಂದು ಅಪ್ಪಟ ಪ್ರೇಮ ಕಥೆಯನ್ನು ನವಿರಾಗಿ ತೋರಿಸುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಲಾಗಿದೆ. ಸಿವಿಲ್ ಇಂಜಿನಿಯರ್ ಆಗಿರುವ ತುಮಕೂರಿನ ಆಕಾಶ್ ನಾಯಕನಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ. ಮೈಸೂರು ಮೂಲದ ರಂಗಭೂಮಿ ನಟಿ ಧರಣಿ ಇಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಸುಧಾಕರ್, ಮಂಜುನಾಥ್, ಕುಮಾರಿ ಭಾವನ ಅಲ್ಲದೆ ಬಹುತೇಕ ಹೊಸಬರಿಗೆ ಅವಕಾಶ ನೀಡಲಾಗಿದೆ. ಸೋದರ ಪವನ್ ಕೆ.ಬಿ. ರಚನೆ ಮಾಡಿರುವ ಮೂರು ಗೀತೆಗಳು ಮತ್ತು ಪದ್ಮ ಪ್ರಸಾದ್ ಜೈನ್ ಬರೆದಿರುವ ಒಟ್ಟು ನಾಲ್ಕು ಗೀತೆಗಳಿಗೆ ಪ್ರವೀಣ್ . ಕೆ.ಬಿ. ಸಂಗೀತ ಸಂಯೋಜಿಸಿದ್ದಾರೆ .

ಪುಟ್ಟಣ್ಣ ಕಣಗಾಲ್ ಅವರ ಚಿತ್ರದಲ್ಲಿ ನಟಿಸಲು ಆಡಿಷನ್‍ಗೆ ಹೋಗಿದ್ದ ಎಸ್. ಸುರೇಶ್ ಅವರ ಕನಸು ನನಸಾಗದಿದ್ದರೂ ತಮ್ಮ ಮಗ ನಾಯಕನಾಗುತ್ತಿರುವುದಕ್ಕೆ ಸಂತೋಷದಿಂದ ನಿರ್ಮಾಣಕ್ಕೆ ಕೈ ಹಾಕಿದ್ದಾರೆ . ಚಿತ್ರದ ಹಾಡುಗಳ ಸಿಡಿಯನ್ನು ನಟ ಕೃಷ್ಣ ಅಜಯ್‍ರಾವ್ ಅನಾವರಣಗೊಳಿಸಿ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಸಿ ಮ್ಯೂಸಿಕ್ ಕಂಪನಿ ಹಾಡುಗಳನ್ನು ಹೊರತಂದಿದೆ. ಚಿತ್ರವನ್ನು ಜೂನ್ ತಿಂಗಳಲ್ಲಿ ತೆರೆಕಾಣಿಸಲು ನಿರ್ಮಾಪಕರು ಯೋಜನೆ ಹಾಕಿಕೊಂಡಿದ್ದಾರೆ .

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin