ಕನ್ನಡಿಗರ ಮೇಲಿನ ದೌರ್ಜನ್ಯ ಖಂಡನೀಯ

ಈ ಸುದ್ದಿಯನ್ನು ಶೇರ್ ಮಾಡಿ

karnatka--vedike

ಬೇಲೂರು, ಸೆ.14- ತಮಿಳುನಾಡಿನ ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯವು ಖಂಡನೀವಾಗಿದ್ದು, ಕರ್ನಾಟಕದಲ್ಲೂ ಕೋಟಿಗೂ ಹೆಚ್ಚು ತಮಿಳಿಗರು ಇದ್ದಾರೆ ಎಂಬುದನ್ನು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಮರೆಯಬಾರದು ಎಂದು ತಾ.ಪಂ ಸದಸ್ಯ ಹಾಗೂ ಒಕ್ಕಲಿಗರ ಯುವ ವೇದಿಕೆ ಮುಖಂಡ ನವೀಲಹಳ್ಳಿ ಕಿಟ್ಟಿ ಹೇಳಿದರು.ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆಸುತ್ತಿರುವ ದೌರ್ಜನ್ಯವನ್ನು ಖಂಡಿಸಿ ಖಾಲಿ ಕೊಡಗಳೊಂದಿಗೆ ಒಕ್ಕಲಿಗರ ಯುವ ವೇದಿಕೆ ಹಾಗೂ ಪ್ರವೀಣ್‍ಶೆಟ್ಟಿ ಕರವೇ ಬಣದವರಿಂದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊದಲು ಕರ್ನಾಟಕದ ಪರ ವಾದ ಮಂಡಿಸುತ್ತಿರುವ ನಾರೀಮನ್ ಬದಲಾಯಿಸಿ, ಸಚಿವ ಎಂ.ಬಿ ಪಾಟೀಲ್ ಅವರಿಂದ ರಾಜೀನಾಮೆ ಪಡೆಯಬೇಕು ಎಂದರು.

ಜಯಲಲಿತಾ ಕರ್ನಾಟಕದವರಾಗಿದ್ದರೂ ಕಾವೇರಿ ನೀರಿನ ಮೂಲಕ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕರ್ನಾಟಕದೊಂದಿಗೆ ಜಗಳ ತೆಗೆದು ಕನ್ನಡಿಗರನ್ನು ರೊಚ್ಚಿಗೆಬ್ಬಿಸುತ್ತಿರುವುದು ಸರಿಯಲ್ಲ. ಇದು ಇದೇ ರೀತಿ ಮುಂದುವರಿದರೆ ತಮಿಳುನಾಡು ಮುಖ್ಯಮಂತ್ರಿಯಾಗಿರುವ ಜಯಲಲಿತ5 ಬೇರೆಯದೆ ರೀತಿಯ ಪರಿಣಾಮವನ್ನೂ ಎದುರಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.ನಂತರ ಮಾತನಾಡಿದ ಕರವೇ (ಪ್ರವೀಣ್‍ಶೆಟ್ಟಿ)ಬಣದ ಅಧ್ಯಕ್ಷ ವಿ.ಎಸ್ ಬೋಜೇಗೌಡ, ಕನ್ನಡಿಗರು ತಾಳ್ಮೆ ಮತ್ತು ಶಾಂತಿ ಪ್ರಿಯರು ಎಂಬುದು ಎಲ್ಲರಿಗೂ ಗೊತ್ತು. ಆದರೆ ಅವರನ್ನು ಕೆಣಕಿದರೆ ಏನಾಗುತ್ತದೆ ಎಂಬುದಕ್ಕೆ 1992 ರಲ್ಲಿ ನಡೆದ ಕಾವೇರಿ ಗಲಾಟೆಯೆ ಸಾಕ್ಷಿ ಎಂದರು.ಪ್ರತಿಭಟನೆಯಲ್ಲಿ ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷ ಪೃಥ್ವಿ, ಕಸಾಪ ಅಧ್ಯಕ್ಷ ದಯಾನಂದ್, ಕರವೇ ಉಪಾಧ್ಯಕ್ಷ ಎ. ರಾಘವೇಂದ್ರ ಹೊಳ್ಳ, ಜಯಪ್ರಕಾಶ್, ದೀಪು, ಮಂಜುನಾಥ್, ಒಕ್ಕಲಿಗ ವೇದಿಕೆಯ ಚೇತನ್, ಮಹೇಶ್, ನಾರಾಯಣ್, ಪುಟ್ಟಸ್ವಾಮಿ, ದಿನೇಶ್ ಇದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin